ಮಾಸ್ಕೋ: ಸ್ನಾನ ಮಾಡುವಾಗಲೂ ಮೊಬೈಲ್ ಬಳಸುವಷ್ಟು ಮೊಬೈಲ್ ಗೀಳು ಅಂಟಿಸಿಕೊಂಡಿರುವವರು ಇಲ್ಲಿ ಸ್ವಲ್ಪ ಕೇಳಿ. ಬಾತ್‍ಟಬ್ ನಲ್ಲಿ ಐಫೋನ್ ಬಿದ್ದ ಪರಿಣಾಮ ವಿದ್ಯುತ್ ಪ್ರವಹಿಸಿ 24 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ರಷ್ಯಾದ ಅರ್ಖಾಂಗೆಲ್ಕಸ್ ನಗರದಲ್ಲಿ ನಡೆದಿದೆ.
ಓಲೆಸ್ಯಾ ಸೆಮೆನೋವಾ ಎಂಬಾಕೆಯೇ ಮೃತ ಯುವತಿ. ಸ್ನಾನಕ್ಕೂ ಮುನ್ನ ತನ್ನ ಐ ಫೋನ್ -8 ಚಾರ್ಜಿಂಗ್ ಹಾಕಿದ್ದರು. ಚಾರ್ಜಿಂಗ್ ಹಾಕಿದ್ದ ಮೊಬೈಲ್ ವೈಯರ್ ನಿಂದ ಕಳಚಿ ಬಾತ್‍ಟಬ್ ನೊಳಗೆ ಬಿದ್ದಿದೆ. ಮೊಬೈಲ್ ನಿಂದ ಹರಿದ ವಿದ್ಯುತ್ ನಿಂದ ಓಲೆಸ್ಯಾ ಮೃತಪಟ್ಟಿದ್ದಾಳೆ. ಅಲೆಸ್ಯಾಳ ಮೃತದೇಹವನ್ನ ಮೊದಲು ಆಕೆಯ ಗೆಳತಿ ಡಾರಿಯಾ ನೋಡಿ ಎಮೆರ್ಜೆನ್ಸಿ ನಂಬರ್ ಗೆ ಕರೆ ಮಾಡಿ ಸಹಾಯ ಕೇಳಿದ್ದಾಳೆ.
ಸ್ಥಳಕ್ಕಾಗಮಿಸಿದ ವೈದ್ಯರು ಅಲೆಸ್ಯಾ ಮೃತಪಟ್ಟಿರೋದನ್ನ ಖಚಿತ ಪಡಿಸಿದ್ದಾರೆ. ಅಲೆಸ್ಯಾ ಅರ್ಖಾಂಗೆಲ್ಕಸ್ ನಗರದ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡಿಕೊಂಡು ಗೆಳತಿ ಜೊತೆ ವಾಸವಾಗಿದ್ದಳು. ಅಲೆಸ್ಯಾ ಮೃತದೇಹ ಹಳದಿ ಬಣ್ಣಕಕ್ಕೆ ತಿರುಗಿತ್ತು. ಆಕೆಯ ನಾಡಿ ಬಡಿತ ಸಹ ನಿಂತಿತ್ತು ಎಂದು ಡಾರಿಯಾ ಹೇಳಿದ್ದಾಳೆ.
PublicNext
10/12/2020 06:01 pm