ಮಂಗಳೂರು: ಪಾಲಕರು ಎಷ್ಟೇ ಜವಾಬ್ದಾರಿಯಿಂದ ಮಕ್ಕಳ ಮೇಲೆ ನಿಗಾ ಇಟ್ರು ಕೂಡಾ ಮಕ್ಕಳ ಕೆಲವು ಎಡವಟ್ಟುಗಳು ಅವರ ಜೀವಕ್ಕೆ ಕುತ್ತು ತಂದು ಬಿಡುತ್ತವೆ.
ಇದಕ್ಕೆ ಸಾಕಷ್ಟು ಉದಾಹರಣೆಗಳನ್ನಾ ನಾವು ನಿವೇಲ್ಲರು ನೋಡಿರುತ್ತೇವೆ ಆದ್ರೆ ಇಲ್ಲೊಬ್ಬ ಮಗ ಅಮ್ಮನ ಕೈಯಿಂದ ತಪ್ಪಿಸಿಕೊಂಡು ಜವರಾಯನ ಕಡೆ ಓಡಿದ ವಿಡಿಯೋ ಎದೆ ಝಲ್ ಎನ್ನುವಂತಿದೆ.
ಹೌದು ರಸ್ತೆ ದಾಟಲು ಅವಸರಪಟ್ಟು ಪಾಲಕರ ಕೈ ತಪ್ಪಿಸಿಕೊಂಡು ಓಡಿ ಹೋದ ಕಾರಣ ಅಪಘಾತದಲ್ಲಿ ಬಾಲಕ ಸಾವು -ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾನೆ.
ಮೈಯಲ್ಲಿ ನಡುಕು ಹುಟ್ಟಿಸುವಂತಹ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದುರಂತ ಉಳ್ಳಾಲದಲ್ಲಿ ನಿನ್ನೆ ಸಂಜೆ ಸಂಭವಿಸಿದೆ.
ಗಂಭೀರ ಗಾಯಗೊಂಡ ಬಾಲಕನನ್ನು ಕೃಷ್ಣ (8) ಎಂದು ಗುರುತಿಸಲಾಗಿದೆ. ಕೂಡಲೇ ಆತನನ್ನು ದೇರಳೆಕಟ್ಟೆ ಯೇನಪೊಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಕರಿಗೆ ಎಚ್ಚರಿಕೆ ಘಂಟೆಯಂತಿರುವ ಈ ಅಪಘಾತ ದೃಶ್ಯ ಪಾಲಕರೇ ನೀವು ಕೂಡಾ ಜೋಕೆ..
PublicNext
02/12/2020 03:34 pm