ಬಳ್ಳಾರಿ: ಮನೆಯ ಗೋಡೆ, ಮೇಲ್ಛಾವಣಿ ಕುಸಿದು ದಂಪತಿ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪ್ರದೇಶದ ಅದೋನಿ ಸ್ಟ್ರೀಟ್ ನಲ್ಲಿ ನಡೆದಿದೆ.
ಇತ್ತೀಚೆಗೆ ಸುರಿದ ಮಳೆಗೆ ಮನೆಯ ಗೋಡೆ ಶಿಥಿಲಗೊಂಡಿತ್ತು ಹಾಗಾಗಿ ಈ ದುರಂತ ಸಂಭವಿಸಿದೆ ಕೊಲಣ್ಣ (45 ವರ್ಷ) ಹಾಗೂ ಆತನ ಪತ್ನಿ ಸಾವಿತ್ರಿ (40) ಮೃತರು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆಯ ಸಂದರ್ಭದಲ್ಲಿ ದಂಪತಿಯ ಪುತ್ರ ಸಂತೋಷ್ (13) ಮಣ್ಣಿನಲ್ಲಿ ಸಿಲುಕಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ.
ಕಳೆದ 2 ದಿನಗಳಿಂದ ನಿವಾರ್ ಚಂಡಮಾರುತದಿಂದಾಗಿ ಮಳೆಯ ಆರ್ಭಟ ಹೆಚ್ಚಿತ್ತು.
ಈ ಕಾರಣದಿಂದಾಗಿ ದಂಪತಿಗಳ ಮಣ್ಣಿನ ಮನೆ ಸಂಪೂರ್ಣವಾಗಿ ನೆಲಸಮಗೊಂಡಿದೆ.
ಸ್ಥಳಕ್ಕೆ ಕೌಲಬಜಾರ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
PublicNext
01/12/2020 03:28 pm