ಹುಬ್ಬಳ್ಳಿ- ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸೇರಿದ ಕಾರು ಇತ್ತೀಚೆಗೆ ಅಪಘಾತವಾಗಿತ್ತು. ಅದರಲ್ಲಿದ್ದ ಚಾಲಕ ಸಂದೀಪ್ ಹಾಗೂ ಶೋಭಾ ಕಟ್ಟಿ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. ಈಗ ದುರ್ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವೈದ್ಯಾಧಿಕಾರಿ ಡಾ. ಸ್ಮಿತಾ ಕಟ್ಟಿ ಅವರು ಕೂಡ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ನವೆಂಬರ್ 20 ರಂದು ರಾತ್ರಿ 8ರ ಸುಮಾರಿಗೆ ಗದಗ ರಸ್ತೆಯ ಬಂಡಿವಾಡ ಬಳಿ ಭೀಕರ ಅಪಘಾತವಾಗಿತ್ತು. ನವೆಂಬರ್ 21ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬಂದಿದ್ದ ಮಾಜಿ ಸಚಿವೆ ಉಮಾಶ್ರೀ ಗಾಯಾಳುಗಳನ್ನು ಭೇಟಿಯಾಗಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಇದೇ ವೇಳೆ ಚಿಕಿತ್ಸೆ ಪಡೆಯುತ್ತಿದ್ದ ಡಾ. ಸ್ಮಿತಾ ಕಟ್ಟಿ ಅವರನ್ನೂ ಉಮಾಶ್ರೀ ಭೇಟಿಯಾಗಿದ್ದರು.
ಇನ್ನೋವಾದಲ್ಲಿ ನ.15ಕ್ಕೆ ಹುಬ್ಬಳ್ಳಿಗೆ ಬಂದಿದ್ದೆ. 19ಕ್ಕೆ ಪುನಃ ಬೇರೆಡೆ ಹೋಗಿ ಬರಬೇಕಿತ್ತು. ಹೀಗಾಗಿ ಕಾರನ್ನು ಚಾಲಕನ ಬಳಿ ಬಿಟ್ಟಿದ್ದೆ. ಆದರೆ ಚಾಲಕ ತಾನೊಬ್ಬನ್ನೇ ಕಾರು ತೆಗೆದುಕೊಂಡು ಹೋಗಿದ್ದ. ಒಂದು ತಿಂಗಳ ಹಿಂದಷ್ಟೇ ಆತನನ್ನು ನಮ್ಮ ಪಕ್ಷದ ಕಾರ್ಯಕರ್ತರು ನನಗೆ ಪರಿಚಯಿಸಿದ್ದರು. ಇಡೀ ಘಟನೆಯಿಂದ ನನಗೆ ನೋವಾಗಿದೆ ಎಂದು ಉಮಾಶ್ರೀ ಹೇಳಿದ್ದರು.
PublicNext
28/11/2020 03:56 pm