ಚಿಕ್ಕಮಗಳೂರು: ಒಂದೊಂದು ಬಾರಿ ವಿಧಿಯಾಟದ ಮುಂದೆ ಎಲ್ಲವೂ ನಶ್ವರ ಮಾಯೆ ಯಾವ ರೂಪದಲ್ಲಿ ಬಂದು ಹೇಗೆ ಬಲಿ ಪಡಿಯುತ್ತೂ ಗೊತ್ತಿಲ್ಲ.
ಇಲ್ಲೊಂದು ಘಟನೆ ನಡೆದಿದೆ ಈ ಘಟನೆ ನೋಡ್ರಿದ್ರೆ ನಿಮ್ಮೆ ಕಣ್ಣುಗಳು ಒದ್ದೆಯಾಗುವುದು ಗ್ಯಾರಂಟಿ.
ಹೌದು ಅಣ್ಣನನ್ನು ಕಾಪಾಡಲು ತಮ್ಮ. ತಮ್ಮನನ್ನು ಕಾಪಾಡಲು ಮತ್ತೊಬ್ಬ ಅಣ್ಣ. ಹೀಗೆ ಒಬ್ಬರನೊಬ್ಬರು ಕಾಪಾಡಲು ಹೋಗಿ ಒಂದೇ ಕುಟುಂಬದ ಮೂವರು ಸೇರಿದಂತೆ ಐವರು ನೀರುಪಾಲಾಗಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಸಮೀಪದ ಹರೇಕೆರೆಯಲ್ಲಿ ನಡೆದಿದೆ.
ಮೃತರೆಲ್ಲರೂ 20 ರಿಂದ 24 ವರ್ಷದ ಯುವಕರಾಗಿದ್ದು, ಮೃತರ ಯುವಕರನ್ನು ಸುದೀಪ್, ಸಂದೀಪ್, ದಿಲೀಪ್, ರಘು ಹಾಗೂ ದೀಪಕ್ ಎಂದು ಗುರುತಿಸಲಾಗಿದೆ.
ದಿಲೀಪ್, ದೀಪಕ್ ಮತ್ತು ಸುದೀಪ್ ಒಂದೇ ಮನೆಯವರು
ನವೆಂಬರ್ 20ರಂದು ಸಂದೀಪ್ ಅಕ್ಕ ಸಂಧ್ಯಾಳ ಮದುವೆಯಾಗಿತ್ತು. ನಿನ್ನೆ ತಾನೇ ಬೀಗರ ಊಟದ ಕಾರ್ಯಕ್ರಮವೂ ಮುಗಿದಿತ್ತು. ಇಂದು ಅಕ್ಕ-ಬಾವನನ್ನು ಬಾವನ ಮನೆಗೆ ಕಳಿಸಿ ಮದುವೆ ನಂತರದ ಕಾರ್ಯದಲ್ಲಿ ತೊಡಗಿದ್ದರು.
ಆದರೆ ವಿಧಿ ಸಂಭ್ರಮದಲ್ಲಿರುವ ಅವರನ್ನು ಸಾವಿನ ಮನೆಗೆ ದೂಡಿದೆ. ಕೆರೆಯಲ್ಲಿ ಮೀನು ಹಿಡಿದು ತಂದು ಅಡುಗೆ ಮಾಡಿ ಊಟ ಮಾಡಿದರಾಯ್ತು ಎಂದು ಐವರು ಅಣ್ಣತಮ್ಮಂದಿರು ಕೆರೆಗೆ ಹೋಗಿದ್ದಾರೆ.
ಮೀನಿಗೆ ಗಾಳ ಹಾಕುವ ಮುನ್ನ ಈಜಲು ನೀರಿಗೆ ಇಳಿದಿದ್ದಾರೆ. ಆದರೆ ಸುಮಾರು 30 ಅಡಿ ಆಳವಿದ್ದ ಕಾರಣ ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಅವನನ್ನ ರಕ್ಷಿಸಲು ಮತ್ತೊಬ್ಬ ನೀರಿಗಿಳಿದಿದ್ದಾನೆ.
ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲು ಒಟ್ಟು ಆರು ಜನ ನೀರಿಗೆ ಇಳಿದಿದ್ದಾರೆ.
ಆದರೆ ಬಾನು ಎಂಬುವನು ಈಜಿ ದಡಸೇರಿದ್ದಾನೆ. ದಡದಲ್ಲಿದ್ದ ಬಾನು ಮಕ್ಕಳು ನೀರಿಗೆ ಬರುತ್ತಾವೆಂದು ಆತ ದಡಕ್ಕೆ ವಾಪಸ್ ಬಂದಿದ್ದಾನೆ.
ಉಳಿದ ಐವರು ಯುವಕರು ನೋಡ-ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದು ಮನೆಯವರು ಕೆರೆ ಬಳಿ ಹೋದಾಗ ಮೃತ ಸಂದೀಪ್ ಪ್ರೀತಿಯಿಂದ ಸಾಕಿದ್ದ ನಾಯಿ ಡ್ಯಾನಿ ಕೂಡ ಮಾಲೀಕನಿಗಾಗಿ ಕೆರೆ ಬಳಿ ಅನಾಥನಂತೆ ಕೂತಿತ್ತು.
ಕೊನೆಗೆ ಸಂದೀಪ್ ಮೃತದೇಹ ಸಿಕ್ಕ ಬಳಿಕ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ತರುವಾಗ ನಾಯಿ ಅಂಬುಲೆನ್ಸ್ ಹಿಂದೆ ಓಡಿ ಬಂದಿದ್ದು ಸ್ಥಳೀಯರ ಕಣ್ಣಲ್ಲಿ ನೀರು ತರಿಸಿತ್ತು.
ಸಂತೋಷದಿಂದ ಅಕ್ಕನ ಮದುವೆ ಮಾಡಿದ್ದಾರೆ ಅಕ್ಕ ಗಂಡನಮನೆ ಸೇರುತ್ತಿದ್ದಂತೆ ಇತ್ತ ತಮ್ಮಂದಿರು ಸಾವಿನ ಮನೆ ಸೇರಿರುವುದು ದುರಂತವೇ ಸರಿ..
PublicNext
25/11/2020 10:16 pm