ಯಾವುದಾದರು ಭೀಕರ ಅಪಘಾತ ನೋಡಿದಾಗ ಓ ಮೈ ಗಾಡ್ ಎಂದು ಬಿಡುತ್ತೇವೆ. ಚಾಲಕ ಒಂದು ಕ್ಷಣ ಯಾಮಾರಿದ್ರೂ ಇಂತಹ ಘಟನೆಗಳು ಸಂಭವಿಸುತ್ತವೆ. ಒಮ್ಮೊಮ್ಮೆ ಜೀವವೇ ಹೋಗಿ ಬಿಡುತ್ತದೆ. ಇನ್ನು ಬದುಕುಳಿದರೂ ಭಾರೀ ಮೊತ್ತದ ನಷ್ಟವನ್ನು ತೆರಬೇಕಾದ ಪ್ರಸಂಗ ಬರುತ್ತದೆ. ಇದಕ್ಕೊಂದು ಉದಾಹರಣೆ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್‌ನ ಎಸೆಕ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಐಷಾರಾಮಿ ಕಾರೊಂದು ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಬಿದ್ದ ದೃಶ್ಯ ಇದಾಗಿದೆ. ಐಷಾರಾಮಿ ಕಾರು ಚಾಲಕ ಆಕಸ್ಮಿಕವಾಗಿ ಎಕ್ಸಲೇಟರ್ ಪ್ರೆಸ್ ಮಾಡಿದ್ದರಿಂದ ಈ ಘಟನೆ ನಡೆದಿದೆ. ಪರಿಣಾಮ ಚಾಲಕನ ತಪ್ಪಿನಿಂದ ಅರೆಕ್ಷಣದಲ್ಲಿ ಪೋರ್ಷೆ ಒಂದು ಕಾರಿಗೆ ತಾಗಿ, ಮತ್ತೊಂದು ಕಾರಿನ ಮೇಲೆ ಬಿದ್ದು ತಳ್ಳಿ ಕೆಳಗೆ ಬಿದ್ದಿದೆ.
PublicNext
24/11/2020 10:41 am