ಮಂಡ್ಯ: ರಸ್ತೆ ಹಂಪ್ ದಾಟುವಾಗ ಬೈಕ್‌ನಿಂದ ಕೈತಪ್ಪಿ ಬಿದ್ದು ಒಂದು ವರ್ಷದ ಕಂದಮ್ಮ ಸಾವನ್ನಪ್ಪಿದ ಘಟನೆ ಮಂಡ್ಯದ ಕಿರಂಗೂರು ಗ್ರಾಮದ ಬಳಿ ನಡೆದಿದೆ.
ಚಂದಗಾಲು ಗ್ರಾಮ ಶಿವಕುಮಾರ್ ಮತ್ತು ರಂಜಿತಾ ದಂಪತಿರ ಒಂದು ವರ್ಷದ ಮಗು ಮೃತ ದುರ್ದೈವಿ. ಶಿವಕುಮಾರ್ ದಂಪತಿ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಕಿರಂಗದೂರು ಗ್ರಾಮದ ಸಮೀಪದಲ್ಲಿ ಶಿವಕುಮಾರ್ ತಮ್ಮ ಬೈಕನ್ನು ನಿಧಾನವಾಗಿ ಹಂಪ್ ಹತ್ತಿಸಿದ್ದಾರೆ. ರಂಜಿತಾ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದರು. ಬೈಕ್ ಹಂಪ್ಸ್ ಹತ್ತಿದ ವೇಳೆ ಮಗು ರಂಜಿತಾ ಅವರ ಕೈಯಿಂದ ಜಾರಿ ರಸ್ತೆಗೆ ಬಿದ್ದಿದೆ. ಈ ವೇಳೆ ಮಗು ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಂದಮ್ಮ ಪ್ರಾಣಬಿಟ್ಟಿದೆ.
ಈ ಪ್ರಕರಣ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಗುವವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
PublicNext
20/11/2020 10:22 am