ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲಗಿದ್ದವರು ಮಸಣ ಸೇರಿದರು: ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ 11 ಸಾವು

ಗಾಂಧಿನಗರ: ಗುಜರಾತಿನ ವಡೋದರ ಬಳಿ ನಡೆದ ಭಯಾನಕ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ ಒಟ್ಟು 11 ಜನ ಮೃತಪಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಇಡೀ ಕುಟುಂಬವೊಂದು ನಾಶವಾಗಿದೆ. ಮೂವರು ಪುರುಷರು ಸೇರಿದಂತೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ ಮೃತನಾದ ಸುರೇಶ್ ಮದುವೆ ಮುಂದಿನ ತಿಂಗಳು ನಿಶ್ಚಯವಾಗಿತ್ತು. ಸೂರತ್ ನಗರದ ನಿವಾಸಿಯಾಗಿದ್ದ ಕುಟುಂಬ ವಾಸಿಸುತ್ತಿದ್ದ ಸೊಸೈಟಿಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ವಡೋದರ ಜಿಲ್ಲೆಯ ವಾಘೋಡಿಯಾ ಚೌಕ್ ಬಳಿಯಲ್ಲಿ ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಅಪಘಾತ ಸಂಭವಿಸಿದೆ. ಮೃತರು ಮಿನಿ ಟ್ರಕ್ ಬಾಡಿಗೆ ಪಡೆದು ಸೂರತ್ ನಿಂದ ಪಾಗಾಗಢದ ಮೂಲಕ ಡಾಕೋರ್ ದೇವಸ್ಥಾನಕ್ಕೆ ತೆರಳುತ್ತಿದ್ದರು. ಅಪಘಾತದ ವೇಳೆ ಪ್ರಯಾಣಿಕರೆಲ್ಲರೂ ನಿದ್ರೆಯಲ್ಲಿದ್ದರು. ಘಟನೆಯ ಬಳಿಕ ಪ್ರಯಾಣಿಕರು ಚೀರಾಟ ಕೇಳಿದ ಸ್ಥಳೀಯರು ಸಹಾಯಕ್ಕೆ ಆಗಮಿಸಿ ಅಂಬುಲೆನ್ಸ್ ಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ವಾಹನದಲ್ಲಿ ಸಿಲುಕಿದ ಮೃತ ದೇಹಗಳನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

18/11/2020 07:51 pm

Cinque Terre

102.24 K

Cinque Terre

0

ಸಂಬಂಧಿತ ಸುದ್ದಿ