ಗದಗ: ವಿದ್ಯುತ್ ಅವಘಡದಿಂದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಬೆಳೆ ನಷ್ಟವಾದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಬೇಲೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುತ್ತಪ್ಪ ಖ್ಯಾಡದ, ಹೂವಪ್ಪ ಖ್ಯಾಡದ, ಹನುಮಂತಪ್ಪ ಖ್ಯಾಡದ ಸಹೋದರರಿಗೆ ಸೇರಿದ ಕಬ್ಬಿನ ಗದ್ದೆ ಇದಾಗಿದೆ.
ಸುಮಾರು ಎಂಟು ಎಕರೆಯಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದೆ. ಈ ವೇಳೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಸೂಕ್ತ ಸಮಯಕ್ಕೆ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಪ್ರತಿ ಎಕರೆಗೆ 40 ಸಾವಿರ ರೂ. ಖರ್ಚು ಮಾಡಿದ್ದ ರೈತ ಸಹೋದರರು ಕಬ್ಬು ಬೆಳೆದಿದ್ದರು. ಪ್ರತಿ ಎಕರೆಗೆ ಐವತ್ತು ಟನ್ ಇಳುವರಿ ಬರುವ ನಿರೀಕ್ಷೆ ಕೂಡಾ ಇತ್ತು. ಆದರೆ ಬೆಂಕಿ ಅನಾಹುತ ನಡೆದರೂ ಸಕಾಲಕ್ಕೆ ಸ್ಥಳಕ್ಕೆ ಬಾರದ ಅಗ್ನಿಶಾಮಕ ಸಿಬ್ಬಂದಿ ಮೇಲೆ ಸ್ಥಳೀಯರು ಆಕ್ರೋಶಿತರಾಗಿದ್ದಾರೆ.
PublicNext
29/11/2021 02:32 pm