ಬೆಂಗಳೂರು: ನೀವು ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದವರನ್ನು ನಂಬಿ ಹಣದ ವ್ಯವಹಾರ ಮಾಡೋ ಮುನ್ನ ಎಚ್ಚರ. ಕಲರ್ ಕಲರ್ ಕಾಗೆ ಹಾರಿಸಿ ನಿಮ್ಮ ಹಣಕ್ಕೆ ಉಂಡೆ ನಾಮ ಹಾಕೋ ಟೀಮ್ ರಾಜ್ಯದಲ್ಲಿ ಆಕ್ಟೀವ್ ಆಗಿದೆ.
ದುಡಿದು ತಿನ್ನೋದನ್ನ ಬಿಟ್ಟು ಅಮಾಯಕರನ್ನು ವಂಚಿಸುವ ಕೆಲಸ ಮಾಡ್ತಿದ್ದವರು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ. ಖಾಸಿಫ್, ಅಜರುದ್ದೀನ್, ಮುದಾಸೀರ್, ಸೈಯದ್ ಡ್ಯಾನಿಶ್, ಶಶಿಕುಮಾರ್, ಇಮ್ತಿಯಾಜ್, ಶಫೀವುಲ್ಲಾ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಎಂತಹ ಕಿಲಾಡಿಗಳು ಅಂದ್ರೆ ಮೊದಲು ಫೇಸ್ ಬುಕ್‌ನಲ್ಲಿ ಹಣವಂತರನ್ನು ವಾಚ್ ಮಾಡ್ತಾರೆ. ನಂತರ ಅವರನ್ನು ಪರಿಚಯ ಮಾಡ್ಕೊಂಡು ನಾನು ದುಬೈನಲ್ಲಿದ್ದೀನಿ. ಭಾರತದಲ್ಲಿ ಬೇರೆ ಬೇರೆ ಬ್ಯುಸಿನೆಸ್ ಇದೆ. ದುಬೈ ಹಣವನ್ನು ಭಾರತಕ್ಕೆ ತರಬೇಕಾದ್ರೆ ಸಾಕಷ್ಟು ಟ್ಯಾಕ್ಸ್ ಕಟ್ಟಬೇಕು. ಟ್ಯಾಕ್ಸ್ ಉಳಿಸೋಕೆ ನಿಮ್ಮ ಅಕೌಂಟ್‌ಗೆ ಹಣ ಹಾಕ್ತೀವಿ ಅಂತಾ ಹೇಳಿ ಬ್ಯಾಂಕ್ ಡೀಟೆಲ್ಸ್ ಪಡೆದು ಲಕ್ಷಾಂತರ ರೂಪಾಯಿ ಹಣ ಡೆಪಾಸಿಟ್ ಮಾಡಿರುವ ರೀತೀಲಿ ಫೇಕ್ ರಿಸಿಪ್ಟ್ ಕಳಿಸ್ತಿದ್ರು. ನಂತರ ನಮಗೆ ಸಮಸ್ಯೆಯಾಗಿದೆ. ಅರ್ಜೆಂಟ್ ಆಗಿ ಹಣ ಹಾಕಿ ಅಂತಾ ವಾಪಸ್ ಹಣ ಹಾಕಿಸಿಕೊಳ್ತಿದ್ರು.
ಹೀಗೆ ಹಣ ಹಾಕಿಸಿಕೊಳ್ಳಲು ಈ ಐನಾತಿಗಳು ಬೇರೆಯದ್ದೆ ಪ್ಲಾನ್ ಮಾಡಿಕೊಂಡಿದ್ರು. ಜನರಿಗೆ ಗೇಮಿಂಗ್ ಆ್ಯಪ್‌ನಲ್ಲಿ ಒಂದು ಸಾವಿರ ಹಣ ಕೊಡ್ತೀವಿ ಅಂತಾ ಅಮಾಯಕರಿಂದ ಡಾಕ್ಯುಮೆಂಟ್ ಪಡೆದುಕೊಂಡು 11 ನಕಲಿ ಅಕೌಂಟ್ ಒಪನ್ ಮಾಡಿಸಿದ್ರು. ಆ ಖಾತೆಗೆ ಜಮೆ ಆದ ವಂಚನೆಯ ಹಣವನ್ನು ಕೆಲವೇ ನಿಮಿಷಗಳಲ್ಲಿ ವಿತ್ ಡ್ರಾ ಮಾಡ್ತಿದ್ರು. ಅಂತೆಯೇ ಮೈಸೂರಲ್ಲಿ ಕುಳಿತು ಬೆಂಗಳೂರಿನ ಆಡುಗೋಡಿಯ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡು ಇದೇ ರೀತಿ ಹಂತ - ಹಂತವಾಗಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ರು. ಮೋಸ ಹೋಗಿದ್ದೇನೆ ಎಂದು ಅರಿತ ವ್ಯಕ್ತಿ ಅಡುಗೋಡಿ ಪೊಲೀಸ್ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಸದ್ಯ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನೂ ಬಂಧಿತರಿಂದ ವಂಚನೆಗಾಗಿ ಬಳಸಿದ್ದ 9 ಮೊಬೈಲ್, 11 ಬ್ಯಾಂಕ್ ಪಾಸ್ ಬುಕ್, 6 ಚೆಕ್ ಬುಕ್, 31 ಎಟಿಎಮ್ ಕಾರ್ಡ್, 9 ಆಧಾರ್ ಕಾರ್ಡ್ ಜಪ್ತಿ ಮಾಡಲಾಗಿದೆ. ತನಿಖೆಯಲ್ಲಿ ಆರೋಪಿಗಳು ಸುಮಾರು 20ಕ್ಕೂ ಹೆಚ್ಚು ಕೇಸ್‌ನಲ್ಲಿ ಭಾಗಿಯಾಗಿರೋದು ಪತ್ತೆಯಾಗಿದೆ.
PublicNext
31/01/2025 06:29 pm