", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/43595620250131034840filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ದ.ಕ. ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೋರ್ವ ಕರ್ತವ್ಯ ನಿರತ ಜೈಲರ್‌ಗೆ ಹಲ್ಲೆ ಮಾಡಿರುವ ಬಗ್ಗೆ ಬರ್ಕೆ ಠಾಣೆ ಯಲ್ಲಿ ಪ್ರಕ...Read more" } ", "keywords": "Node,Mangalore,Crime,Udupi", "url": "https://publicnext.com/node" } ಮಂಗಳೂರು: ದ.ಕ. ಜಿಲ್ಲಾ ಕಾರಾಗೃಹದ ಜೈಲರ್‌ಗೆ ಹಲ್ಲೆ-ಪ್ರಕರಣ ದಾಖಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ.ಕ. ಜಿಲ್ಲಾ ಕಾರಾಗೃಹದ ಜೈಲರ್‌ಗೆ ಹಲ್ಲೆ-ಪ್ರಕರಣ ದಾಖಲು

ಮಂಗಳೂರು: ದ.ಕ. ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೋರ್ವ ಕರ್ತವ್ಯ ನಿರತ

ಜೈಲರ್‌ಗೆ ಹಲ್ಲೆ ಮಾಡಿರುವ ಬಗ್ಗೆ ಬರ್ಕೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಾ ಯಾನೆ ಜಪಾನ್ ಮಂಗ ಹಲ್ಲೆ ಆರೋಪಿ ಎಂದು ಜೈಲರ್ ವಿಜಯ್ ಕುಮಾರ್ ಸಂಕಾ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ನಗರದ ಕೊಡಿಯಾಲ್‌ ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದ 'ಎ ಬ್ಲಾಕ್'ನ ಕೊಠಡಿ ಸಂಖ್ಯೆ 3ರಲ್ಲಿ ಬೀಗ ಮುದ್ರೆ ಮಾಡುವ ಸಂದರ್ಭ ಕೈದಿ ರಾಜಾ ಲೈಟರ್ ನೀಡುವಂತೆ ಒತ್ತಾಯಿಸಿದ್ದಾನೆ. ಲೈಟರ್ ಕೊಡಲಾಗದು ಎಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸರಿಯಾಗಿ ಮಾತನಾಡು, ಅವಾಚ್ಯ ಶಬ್ದ ಬಳಸಬೇಡ ಎಂದು ಹೇಳಿದೆ. ಈ ವೇಳೆ ಮತ್ತಷ್ಟು

ನಿಂದಿಸುತ್ತಾ ಕೊಠಡಿಯ ಒಳಗಡೆಯಿಂದಲೇ ತನ್ನ ಬಲಕೈಯನ್ನು ಎಳೆದು ಪರಚಿ ತಿರುಗಿಸಿದ್ದಾನೆ. ಇದರಿಂದ ತನ್ನ ಬಲಕೈಗೆ ತೀವ್ರ ಪೆಟ್ಟಾಗಿದೆ ಎಂದು ಜೈಲರ್ ಪೊಲೀಸ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಜೈಲರ್ ವಿಜಯ್ ಕುಮಾರ್ ವೆಸ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

31/01/2025 03:48 pm

Cinque Terre

760

Cinque Terre

0

ಸಂಬಂಧಿತ ಸುದ್ದಿ