ಬ್ರಹ್ಮಾವರ: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಹಾಸನ ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠ ಮಹಾಸಂಸ್ಥಾನದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಬುಧವಾರ ಮಹಾಕುಂಭ ಸ್ನಾನ ಮಾಡಿದರು. ಬಳಿಕ ಶ್ರೀಗಳು ಗಂಗಾ ಪೂಜೆ ನೆರವೇರಿಸಿದರು.
ಮೂಲ ಗುರುಪೀಠ ಅರೆಮಾದನಹಳ್ಳಿಯಾದರೂ ಶಿಷ್ಯವರ್ಗ ದೇಶದ ನಾನಾ ಭಾಗಗಳಲ್ಲಿ ಇದ್ದು, ಪ್ರಯಾಗ್ ರಾಜ್ನಲ್ಲಿ ಅಲ್ಲಿನ ಶಿಷ್ಯವರ್ಗ ವಿಶ್ವಕರ್ಮ ಸಮಾಜದವರಿಂದ 7 ದಿನಗಳ ಕಾಲ ನಡೆದ ವಿಶ್ವಕರ್ಮ ಪುರಾಣದ ಸಮಾರೋಪ ಸಮಾರಂಭ ಮಂಗಳವಾರ ಶ್ರೀಗಳ ಉಪಸ್ಥಿತಿಯಲ್ಲಿ ಜರುಗಿತ್ತು. ಶ್ರೀಗಳ ಒಂದು ಶಾಖಾ ಮಠ ಉಡುಪಿ ಜಿಲ್ಲೆಯ ಕೊಕ್ಕರ್ಣೆ ಬಳಿಯ ಕಜ್ಕೆಯಲ್ಲಿದ್ದು, ಕಳೆದ ವರ್ಷ ಶ್ರೀಗಳು ಶ್ರೀ ಅನ್ನಪೂರ್ಣೇಶ್ವರೀ ದೇವಿಯನ್ನು ಪ್ರತಿಷ್ಠಾಪಿಸಿದ್ದರು.
PublicNext
30/01/2025 05:30 pm