ಜುಬಾ: ದಕ್ಷಿಣ ಸೂಡಾನ್ನ ಉತ್ತರ ಭಾಗದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಯುನಿಟಿ ಸ್ಟೇಟ್ನ ವಾರ್ತಾ ಸಚಿವ ಗಟ್ವೆಚ್ ಬಿಪಲ್ ಬೋತ್, 'ದುರಂತಕ್ಕೀಡಾದ ವಿಮಾನದಲ್ಲಿ 21 ಜನ ಪ್ರಯಾಣಿಸುತ್ತಿದ್ದು, ಈ ಪೈಕಿ ಒಬ್ಬ ಮಾತ್ರ ಬದುಕುಳಿದಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ. ಅಪಘಾತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು GPOC ಉದ್ಯೋಗಿಗಳಾಗಿದ್ದರು.
ಇವರಲ್ಲಿ 16 ದಕ್ಷಿಣ ಸೂಡಾನ್ ಪ್ರಜೆಗಳು, ಇಬ್ಬರು ಚೀನಾ ಪ್ರಜೆಗಳು ಮತ್ತು ಒಬ್ಬ ಭಾರತೀಯ ಪ್ರಜೆ ಸೇರಿದ್ದಾರೆ.." ಎಂದು ವಾರ್ತಾ ಸಚಿವ ಗಟ್ವೆಚ್ ಬಿಪಲ್ ಬೋತ್ ತಿಳಿಸಿದ್ದಾರೆ.
ವಿಮಾನವು ಸ್ಥಳೀಯ ಸಮಯ ಬೆಳಿಗ್ಗೆ10.30ಕ್ಕೆ ರಾಜಧಾನಿ ಜುಬಾಗೆ ಹೊರಟ ಕೆಲವೇ ಕ್ಷಣಗಳಲ್ಲಿ, ಯುನಿಟಿ ಸ್ಟೇಟ್ನಲ್ಲಿ ರನ್ವೇದಿಂದ ಕೇವಲ 500 ಮೀಟರ್ ದೂರದಲ್ಲಿ ಪತನಗೊಂಡಿದೆ. ನಿಯಮಿತ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಪ್ರದೇಶದ ತೈಲ ಕ್ಷೇತ್ರಗಳ ಬಳಿ ವಿಮಾನ ಪತನಗೊಂಡಿದೆ. ಅಪಘಾತಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ,
PublicNext
30/01/2025 03:17 pm