", "articleSection": "Business,Government", "image": { "@type": "ImageObject", "url": "https://prod.cdn.publicnext.com/s3fs-public/222042-1738151222-Add-a-heading---2025-01-29T171651.581.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ವಾಷಿಂಗ್ಟನ್: ಅಮೆರಿಕದ ಷೇರು ಮಾರುಕಟ್ಟೆಯಲ್ಲಿ, ಚೀನಾದ ಡೀಪ್‌ಸೀಕ್ ಆರ್ಟೀಫೀಶಿಯಲ್ ಇಂಟೆಲಿಜೆನ್ಸ್(AI) ಬಿರುಗಾಳಿಯನ್ನೇ ಎಬ್ಬಿಸಿದೆ. ಎನ್‌...Read more" } ", "keywords": "DeepSeek, American AI firms, AI technology, artificial intelligence, tech news, disruptive AI, US AI industry, China AI competition, AI innovation. ,,Business,Government", "url": "https://publicnext.com/node" } ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಚೀನಾದ AI ಡೀಪ್‌ಸೀಕ್.! - ಬಳಕೆ, ಡೌನ್ಲೋಡ್ ಹೇಗೆ?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಚೀನಾದ AI ಡೀಪ್‌ಸೀಕ್.! - ಬಳಕೆ, ಡೌನ್ಲೋಡ್ ಹೇಗೆ?

ವಾಷಿಂಗ್ಟನ್: ಅಮೆರಿಕದ ಷೇರು ಮಾರುಕಟ್ಟೆಯಲ್ಲಿ, ಚೀನಾದ ಡೀಪ್‌ಸೀಕ್ ಆರ್ಟೀಫೀಶಿಯಲ್ ಇಂಟೆಲಿಜೆನ್ಸ್(AI) ಬಿರುಗಾಳಿಯನ್ನೇ ಎಬ್ಬಿಸಿದೆ. ಎನ್‌ವಿಡಿಯಾ (Nvidia) ಚಿಪ್ ತಯಾರಕ ಸಂಸ್ಥೆಯ ಮೌಲ್ಯವು ಸೋಮವಾರ ಒಂದೇ ದಿನದಲ್ಲಿ ಸರಿಸುಮಾರು 600 ಬಿಲಿಯನ್ ಡಾಲರ್ (ಸುಮಾರು 52 ಲಕ್ಷ ಕೋಟಿ) ಕುಸಿಯಲು ಕಾರಣವಾಗಿದ್ದು, ಚೀನಾದ ಒಂದು ಪುಟ್ಟ ಸ್ಟಾರ್ಟ್ಅಪ್ ಆಗಿರುವ ಡೀಪ್‌ಸೀಕ್ (DeepSeek). ಅಮೆರಿಕದ ತಂತ್ರಜ್ಞಾನ ಮಾರುಕಟ್ಟೆಯನ್ನೇ ಅಲುಗಾಡಿಸಿಬಿಟ್ಟಿದೆ.

ಇಲ್ಲಿಯವರೆಗೆ ಚಾಟ್‌ಜಿಪಿಟಿ AI ಬಗ್ಗೆ ಮಾತನಾಡುತ್ತಿದ್ದ ಜಗತ್ತು, ಈಗ ಏಕಾಏಕಿ ಡೀಪ್‌ಸೀಕ್‌ AI ಬಗ್ಗೆ ಮಾತನಾಡತೊಡಗಿದೆ. ಇದರಿಂದ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ NVIDIA, Broadcom, Qualcomm ಸೇರಿದಂತೆ ಹಲವು AI ಚಿಪ್ ಮೇಕರ್‌ ಕಂಪನಿಗಳ ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ.

ಕೇವಲ ಒಂದು ತಿಂಗಳ ಅವಧಿಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಚೀನಾದ ಸ್ಟಾರ್ಟಪ್‌ ಕಂಪನಿ, ತನ್ನ ಪ್ರತಿಸ್ಪರ್ಧಿಗಳಿಗಿಂತ ಉತ್ತಮ ಫಲಿತಾಂಶ ನೀಡಬಲ್ಲ ಡೀಪ್‌ಸೀಕ್‌ AI ಆ್ಯಪ್‌ನ್ನು ಲಾಂಚ್ ಮಾಡಿದೆ. ಅತೀ ಕಡಿಮೆ ವೆಚ್ಚದಲ್ಲಿ ಈ ಎಐ ಸರ್ವೀಸ್ ಅಭಿವೃದ್ಧಿಪಡಿಸಲಾಗಿದ್ದು, ಉಚಿತ ಡೌನ್‌ಲೋಡ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಇದರಿಂದ ಅಮೆರಿಕದ ಗೂಗಲ್‌ನ ಓಪನ್ AI, ಚಾಟ್‌ಜಿಪಿಟಿ ಸೇರಿದಂತೆ ಹಲವು AI ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ.

ಚೀನಾದ ಡೀಪ್‌ಸೀಕ್‌ ಸ್ಟಾರ್ಟಪ್‌ ಕಂಪನಿಯು ಕಳೆದ ಜನವರಿ 10ರಂದು ತನ್ನ ಹೊಸ AI ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿತು. ವಿಶ್ವದ ಮೊದಲ ಉಚಿತ ಚಾಟ್‌ಬಾಟ್ ಸರ್ವೀಸ್‌ಗೆ ಜಾಗತಿಕ ಮನ್ನಣೆ ದೊರೆತಿದ್ದು, ಜನವರಿ 27ರಲ್ಲಿ ಅಮೆರಿಕವೊಂದರಲ್ಲೇ ಚಾಟ್‌ಜಿಪಿಟಿಗಿಂತ ಹೆಚ್ಚು ಡೌನ್‌ಲೋಡ್‌ ಆದ AI ಆ್ಯಪ್ ಆಗಿ ಹೊರಹೊಮ್ಮಿದೆ. ಐಒಎಸ್ ಆ್ಯಪ್ ಸ್ಟೋರ್‌ನಲ್ಲಿ ಡೀಪಸ್‌ಸೀಕ್‌ AI ಗರಿಷ್ಠ ಡೌನ್‌ಲೋಡ್‌ ಕಂಡಿದೆ.

ಡೀಪ್‌ಸೀಕ್‌ ಕಂಪನಿಯು ಜನರೇಟೀವ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಾಟ್‌ಬಾಟ್ ಒಪನ್ ಸೋರ್ಸ್‌ನ ಬಳಕೆಯನ್ನು ಉಚಿತವಾಗಿ ನೀಡಿದೆ. ಅಮೆರಿಕದ ಚಾಟ್‌ಜಿಪಿಟಿಯ ರಿಸನಿಂಗ್‌ AIನಲ್ಲಿ ಈ ಸೇವೆ ಉಚಿತವಾಗಿ ಲಭ್ಯವಿಲ್ಲ. ಈ ತಂತ್ರಜ್ಞಾನ ಉಚಿತವಾಗಿ ಜನರ ಕೈಸೇರುವಂತೆ ಮಾಡಲು, ಸ್ಟಾರ್ಟಪ್‌ ಕಂಪನಿಯು ಚೀನಾದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಎಂಜಿನಿಯರ್‌ಗಳನ್ನು ನೇಮಿಸಿಕೊಂಡಿದೆ.

ಡೀಪ್‌ಸೀಕ್‌ AI ಬಳಕೆ ಹೇಗೆ?

ಸದ್ಯ ಡೀಪ್‌ಸೀಕ್ ಆರ್1 ಹಾಗೂ ಆರ್0 ಮಾದರಿಯ AI ತಂತ್ರಜ್ಞಾನವನ್ನು ಪರಿಚಯಿಸಿರುವ ಚೀನಾದ ಸ್ಟಾರ್ಟಪ್‌ ಕಂಪನಿ, ಈ ಪೈಕಿ ಆರ್‌1 ಮಾದರಿಯ ತಕ್ಷಣದ ಬಳಕೆಗೆ ಜನರಿಗೆ ಅವಕಾಶ ಕಲ್ಪಿಸಿದೆ. ಸಂಪೂರ್ಣ ಉಚಿತವಾಗಿರುವ ಈ AI ಟೂಲ್‌ ಬಳಕೆ ಮಾಡಲು ಯಾವುದೇ ನಿರ್ಬಂಧಗಳನ್ನು ವಿಧಿಸದಿರುವುದು ವಿಶೇಷ.

ಡೀಪ್‌ಸೀಕ್‌ AI ಆ್ಯಪ್‌ನ್ನು ಆ್ಯಪ್ ಸ್ಟೋರ್ ಮೂಲಕ ಸುಲಭವಾಗಿ ಮತ್ತು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಆ್ಯಪ್ ಸ್ಟೋರ್‌ನಲ್ಲಿ ಡೀಪ್‌ಸೀಕ್ ಸರ್ಚ್ ಮಾಡಿ ಅಧಿಕೃತ ಆ್ಯಪ್‌ನ್ನು ಡೌನ್‌ಲೋಡ್‌ ಮಾಡಬಹುದು. ವೆಬ್ ಬಳಕೆಗೆ ಡೀಪ್‌ಸೀಕ್.ಕಾಂ ಕ್ಲಿಕ್ ಮಾಡಿ ಗೂಗಲ್ ಖಾತೆ ಮೂಲಕ ಲಾಗಿನ್ ಆದರೆ, ಚಾಟ್‌ಜಿಪಿಟಿ ರೀತಿಯ ಇಂಟರ್‌ಫೇಸ್ ಕಾಣಿಸಿಕೊಳ್ಳಲಿದೆ. ಅಲ್ಲಿಂದ ಯಾರಾದರೂ ಈ ಅತ್ಯಾಧುನಿಕ AI ತಂತ್ರಜ್ಞಾನವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಅಮೆರಿಕದ ಒಪನ್ AIನ ಚಾಟ್‌ಜಿಪಿಟಿಗಿಂತ ಡೀಪ್‌ಸೀಕ್‌ AI ಹೆಚ್ಚು ನಿಖರತೆ ಮತ್ತು ಉತ್ತಮ ಫಲಿತಾಂಶ ನೀಡುತ್ತಿದೆ ಎಂದು ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

Edited By : Vijay Kumar
PublicNext

PublicNext

29/01/2025 05:17 pm

Cinque Terre

53.45 K

Cinque Terre

0

ಸಂಬಂಧಿತ ಸುದ್ದಿ