ಕೊಪ್ಪಳ : ಕೊಪ್ಪಳದ ಪೌರಕಾರ್ಮಿಕ ಹಾಗೂ ಪತ್ರಕರ್ತರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಭಾಗಿ ಆಗಿದ್ರು. ಈ ವೇಳೆ ಸಂವಿಧಾನದ ಮಹತ್ವ ಸಾರುವುದರ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರನ್ನ ಜಮೀರ್ ಹಾಡಿ ಹೊಗಳಿದ್ದಾರೆ.
ಸಂವಿಧಾನ ಇಲ್ಲವಾದರೆ ನಾನು ಮಂತ್ರಿಯಾಗುತ್ತಿರಲಿಲ್ಲ, ನಿಮಗೆ ಸೌಲಭ್ಯಗಳು ಸಿಗುತ್ತಿರಲಿಲ್ಲ ಅಂತ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಮುಂದುವರಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮೆಲ್ಲ ಸಮುದಾಯದ ನಾಯಕ. ಅವರು ಕೊಟ್ಟ ಸಂವಿಧಾನದಿಂದ ಎಲ್ಲಾ ವರ್ಗದ ಜನರು ಬದುಕುತ್ತಿದ್ದಾರೆ ಆದ್ರೆ ಕೆಲವರು ಸಂವಿಧಾನ ಬದಲಾವಣೆ ಮಾಡಬೇಕು ಎನ್ನುವ ವಿಚಾರ ಮಾಡಿದ್ದರು ಅಂತ ಟಾಂಗ್ ಕೊಟ್ಟಿದ್ದಾರೆ.
ಈ ವೇಳೆ ಸಿಎಂ ಸಿದ್ದು ಹೊಗಳಿದ ಜಮೀರ್, ಸಂವಿಧಾನ ಬದ್ಧವಾಗಿ ಸಿದ್ದರಾಮಯ್ಯ ಮಾತ್ರ ಬಡವರ ಪರ ಕೆಲಸ ಮಾಡುತ್ತಾರೆ. ಬಿಜೆಪಿ, ಜೆಡಿಎಸ್ ಯಾಕೆ ಬಡವರ ಪರ ಕೆಲಸ ಮಾಡ್ತಿಲ್ಲ ಅಂತ ಪ್ರಶ್ನಿಸಿದ್ದಾರೆ.. ಬಿಜೆಪಿ ಸಾಧನೆ ಏನು ಇಲ್ಲ. ಬರಿ ಹಿಂದು ಮುಸ್ಲಿಂ ಜಗಳ ಹಚ್ಚುತ್ತಾರೆ.
ಅವರಿಗೆ ಹಿಂದೂ ಮುಸ್ಲಿಂ ಇಬ್ಬರೂ ಬೇಕಿಲ್ಲ. ನಾನು ಮೊದಲು ಕನ್ನಡಿಗ, ಹಿಂದುಸ್ತಾನಿ ನಂತರ ಮುಸ್ಲಿಂ ಆಗಿರುತ್ತೇನೆ . ರಾಜಕಾರಣದಲ್ಲಿ ಜಾತಿ ಮಾಡಬಾರದು. ಹಾಗೆ ಮಾಡಿದರೆ ಹುಳ ಬಿದ್ದು ಸಾಯುತ್ತಾರೆ. ಜಾತಿ ಮಾಡುವಂತಿದ್ದರೆ ಮನೆಯಲ್ಲಿರಲಿ. ಇಸ್ಲಾಂ ಧರ್ಮದಲ್ಲಿ ಜಾತಿ ಮಾಡುವಂತಿಲ್ಲ. ನಾನು ಅನೇಕ ರಾಷ್ಟ್ರ ಸುತ್ತಿರುವೆ. ನಮ್ಮದೆಲ್ಲ ಒಂದೇ ರಕ್ತ. ದೇಶಕ್ಕಾಗಿ ನಾವೆಲ್ಲ ಒಂದಾಗಬೇಕು. ಜನರ ಸೇವೆ ಮಾಡಿದರೆ ಜನ ಕೈ ಬಿಡಲ್ಲ.
PublicNext
29/01/2025 01:51 pm