ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಶನಿವಾರಸಂತೆಯಲ್ಲಿ ಪ್ರಥಮ ಭಾರಿಗೆ ಕೆರೆ ಅಭಿವೃದ್ದಿ ಹಾಗೂ ಉದ್ಯಾನವನ ನಿರ್ಮಾಣ

ಶನಿವಾರಸಂತೆ: ಜಿಲ್ಲೆಯಲ್ಲೆ ಪ್ರಥಮ ನಿರ್ಮಾಣವಾಗುತ್ತಿರುವ ‘ಎ’ ಶೇಣಿ ಮಾದರಿಯ ಕೆರೆ ಉದ್ಯಾನವನವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಎಸ್. ಬೋಸರಾಜು ಉದ್ಘಾಟನೆ ಮಾಡಿದರು.

ಕೊಡಗು ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಕೋಟ್ಯಾಂತರ ವೆಚ್ಚದಲ್ಲಿ ಕೆರೆ ಅಭಿವೃದ್ದಿ ಹಾಗೂ ಉದ್ಯಾನವನ ನಿರ್ಮಾಣ, ಕಾರಂಜಿ, ವಿಶ್ರಾಂತಿ ಧಾಮ ಮತ್ತಿತರ ಸಕಲ ವ್ಯವಸ್ಥೆಯಡಿಯಲ್ಲಿ ಕೆರೆಯೊಂದನ್ನು ನಗರಗಳಲ್ಲಿರುವ ಪ್ರಖ್ಯಾತ ಕೆರೆಗಳನ್ನು ‘ಎ’ ಶೇಣಿಯ ವ್ಯವಸ್ಥೆಯಡಿಯಲ್ಲಿ ಅಭಿವೃದ್ದಿ ಪಡಿಸಿರುವಂತೆ ಕೊಡಗು ಜಿಲ್ಲೆಯ ಕೊಡ್ಲಿಪೇಟೆ ಗ್ರಾ.ಪಂ.ಗೆ ಸೇರಿದ ನೂರಾರು ವರ್ಷಗಳ ಹಿಂದಿನ ನಂದಿಪುರ ಕೆರೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ಕೊಡ್ಲಿಪೇಟೆ ಗ್ರಾ.ಪಂ.ಗೆ ಒಳಪಡುವ ನಂದಿಪುರ ಕೆರೆಯು ಸುತ್ತಮುತ್ತಲಿನ ರೈತರ ನೂರಾರು ಏಕರೆ ಕೃಷಿ ಜಮೀನಿಗೆ ನೀರು ಒದಗಿಸುವ 4.50. ಏಕರೆ ವಿಸ್ತೀರ್ಣ ಹೊಂದಿರುವ ಕೆರೆಯಾಗಿದೆ. ಬಹಳಷ್ಟು ವರ್ಷಗಳಿಂದ ಈ ಕೆರೆಯಲ್ಲಿ ಹೂಳು ತುಂಬಿತ್ತು. ಹಿಂದಿನ ಸರಕಾರದ ಅವಧಿಯಲ್ಲಿ ಈ ಕೆರೆಯಲ್ಲಿ ಹೂಳು ತೆಗೆಯಲಾಗಿತ್ತು. ಕೊಡ್ಲಿಪೇಟೆ ಮೂಲ ನಿವಾಸಿಯಾಗಿರುವ ಈಗ ಬೆಂಗಳೂರಿನ ಹೈಕೋರ್ಟಿನಲ್ಲಿ ಹಿರಿಯ ವಕೀಲ ಮತ್ತು ರಾಜಕಾರಣಿ ಎಚ್.ಎಸ್.ಚಂದ್ರಮೌಳಿ ಅವರು ತನ್ನೂರಿನ ಕೆರೆಯನ್ನು ಅಭಿವೃದ್ದಿ ಪಡಿಸುವ ಜೊತೆಯಲ್ಲಿ ಸಾಂಸ್ಕೃತಿಕ ವ್ಯವಸ್ಥೆಯಡಿಯಲ್ಲಿ ಕೆರೆ ಸುತ್ತಾ ಉದ್ಯಾನವನದ ವ್ಯವಸ್ಥೆ, ಕೊಡ್ಲಿಪೇಟೆ ಪಟ್ಟಣದ ನಾಗರಿಕರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಬೆಳಿಗ್ಗೆ ಸಂಜೆ ವಾಕಿಂಗ್ ಮಾಡಿ ಉದ್ಯಾನವನದಲ್ಲಿ ವಿಶ್ರಾಂತಿ ಪಡೆಯಲು ವಿಶ್ರಾಂತಿ ಧಾಮ, ಉದ್ಯಾನವನದಲ್ಲಿ ಕಾರಂಜಿ ನಿರ್ಮಾಣ, ಮಕ್ಕಳು ಉದ್ಯಾನವನದಲ್ಲಿ ಆಟ ಆಡಲು ವ್ಯವಸ್ಥೆ, ರಾತ್ರಿ ವೇಳೆಯಲ್ಲಿ ಉದ್ಯಾನವನದಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪದ ವ್ಯವಸ್ಥೆ, ಕೆರೆ ಸುತ್ತಾ ತಡೆ ಬೇಲಿ ನಿರ್ಮಾಣ ಇನ್ನು ಮುಂತಾದ ವ್ಯವಸ್ಥೆಯಡಯಲ್ಲಿ ಈ ಕೆರೆಯನ್ನು ಪ್ರೇಕ್ಷಣಿಯ ಸ್ಥಳವನ್ನಾಗಿ ಅಭಿವೃದ್ದಿ ಪಡಿಸುವ ಯೋಜನೆಯನ್ನು ಒಳಗೊಂಡ ಮನವಿಯನ್ನು ಹಿಂದಿನ ಸರಕಾರದ ಅವಧಿಯಲ್ಲಿ ಸಲ್ಲಿಸಿದರು.

ಆಗಿನ ಸರಕಾರದ ಸಚಿವರಾಗಿದ್ದ ಮಾಧುಸ್ವಾಮಿ ಅವರು ಪ್ರಸ್ತಾವನೆಗೆ ಸಕರಾತ್ಮಕವಾಗಿ ಸ್ಪಂದಿಸಿದ್ದರು ಈಗಿನ ಸರಕಾರ ಚಂದ್ರಮೌಳಿಯರು ಈ ಹಿಂದೆ ನೀಡಿದ್ದ ಮನವಿಗೆ ಸ್ಪಂದಿಸಿತ್ತು. ಕೊಡಗು ಉಸ್ತುವಾರಿ ಸಚಿವ ಬೋಸರಾಜ್, ಶಾಸಕ ಡಾ.ಮಂಥರ್ ಗೌಡ ಅವರು ಯೋಜನೆ ಕಾರ್ಯರೂಪಕ್ಕೆ ಹಸಿರು ನಿಶಾನೆ ತೋರಿದ್ದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕೆರೆ ಮತ್ತು ಯೋಜನೆ ಅಭಿವೃದ್ದಿ ಕಾಮಗಾರಿಗೆ 3.90 ಕೋಟಿ ರು ಬಿಡುಗಡೆ ಮಾಡಿತ್ತು. ಅದರಂತೆ ಈಗ ಕೆರೆ ಯೋಜನೆ ಅಭಿವೃದ್ದಿ ಕಾಮಗಾರಿಯು ಮುಕ್ತಾಯ ಹಂತಕ್ಕೆ ಬಂದಿದೆ ಸಧ್ಯದಲ್ಲಿ ಕೆರೆಯನ್ನು ಲೋಕಾರ್ಪಣೆಗೊಳಿಸಲಾಗುತ್ತದೆ. ಬೆಂಗಳೂರು ಮತ್ತು ಮುಂತಾದ ಕಡೆಗಳಲ್ಲಿ ಕೆರೆಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ದಿ ಪಡಿಸಿರುವ ಮಾದರಿಯಲ್ಲೆ ನಂದಿಪುರ ಕೆರೆಯನ್ನು ಅಭಿವೃದ್ದಿ ಪಡಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

27/01/2025 05:12 pm

Cinque Terre

460

Cinque Terre

0

ಸಂಬಂಧಿತ ಸುದ್ದಿ