", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/457940_1738136274_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RohitMadakeri" }, "editor": { "@type": "Person", "name": "9535981195" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮಡಿಕೇರಿ: ಕೊಡವ ಮತ್ತು ಅರೆಭಾಷೆ ಗೌಡ ಜನಾಂಗದ ನಡುವೆ ಬೇರೆ ಬೇರೆ ಕಾರಣಕ್ಕೆ ಈ ಹಿಂದಿನಿಂದಲೂ ಸ್ವಲ್ಪ ಮಟ್ಟಿನ ಹಗೆತನ, ಪೈಪೋಟಿ ಇದ್ದು 1991ರಲ...Read more" } ", "keywords": "Node,Kodagu,News", "url": "https://publicnext.com/node" }
ಮಡಿಕೇರಿ: ಕೊಡವ ಮತ್ತು ಅರೆಭಾಷೆ ಗೌಡ ಜನಾಂಗದ ನಡುವೆ ಬೇರೆ ಬೇರೆ ಕಾರಣಕ್ಕೆ ಈ ಹಿಂದಿನಿಂದಲೂ ಸ್ವಲ್ಪ ಮಟ್ಟಿನ ಹಗೆತನ, ಪೈಪೋಟಿ ಇದ್ದು 1991ರಲ್ಲಿ ಕೊಡಗು ಏಕೀಕರಣ ರಂಗ ಈ ಪರಿಪಾಠಕ್ಕೆ ಪೂರ್ಣ ವಿರಾಮ ಹಾಕುವ ಪ್ರಯತ್ನ ನಡೆಸಿ ಸಾಕಷ್ಟು ಯಶಸ್ಸು ಕಂಡಿತ್ತು. ಆದರೆ ರಾಜಕೀಯ ಪಕ್ಷಗಳು ಮತ್ತು ಕೆಲ ಜನನಾಯಕರು ಜಾತಿ ಜಾತಿ ನಡುವಿನ ಕಂದಕವನ್ನು ರಾಜಕೀಯ ಕಾರಣಕ್ಕೆ ಜೀವಂತವಾಗಿಟ್ಟಿದ್ದಾರೆ ಎಂದು ಕೊಡವ ಟ್ರಸ್ಟ್ ನ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಕೊಡವ ಟ್ರಸ್ಟ್ ನ ಅಧ್ಯಕ್ಷರಾದ ಎ.ಎ. ತಮ್ಮು ಪೂವಯ್ಯ ಹಾಗೂ ಸಂಚಾಲಕರಾದ ಮಂದಪಂಡ ಕೆ. ಅಪ್ಪಚ್ಚು ಅವರು ಕಟ್ಟೆಮಾಡು ದೇವಾಲಯದ ವಾರ್ಷಿಕ ಹಬ್ಬದ ಸಮಯದಲ್ಲಿ ನಡೆದ ಅಹಿತಕರ ಘಟನೆಯನ್ನು ಸೌಹಾರ್ದಯುತವಾಗಿ ಪರಿಹರಿಸುವಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಕೊಡವ ಮತ್ತು ಅರೆಭಾಷೆ ಗೌಡ ಜನಾಂಗದ ಸಂಘ ಸಂಸ್ಥೆಗಳು ವಿಫಲವಾಗಿದ್ದೇ ಸೋಮವಾರ ನಡೆದ ಘಟನೆಗೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಕಟ್ಟಿಮಾಡುವಿನ ದೇವಸ್ಥಾನದಲ್ಲಿ ಕೊಡವ ಜನಾಂಗದವರ ಮೇಲೆ ನಡೆದ ಹಲ್ಲೆ ಪ್ರಕರಣ ಹಾಗೂ ಸೋಮವಾರ ಮೂರ್ನಾಡುವಿನಲ್ಲಿ ಕೆಲ ಯುವಕರಿಂದ ಆರ್ಚಕ ವಿಘ್ನೇಶ್ ಭಟ್ ಮೇಲೆ ನಡೆದ ಹಲ್ಲೆಯನ್ನು ಕೊಡವ ಟ್ರಸ್ಟ್ ತೀವ್ರವಾಗಿ ಖಂಡಿಸುತ್ತದೆ. ವಿಘ್ನೇಶ್ ಭಟ್ ಯಾವುದೇ ತಪ್ಪನ್ನು ಮಾಡಿದ್ದರೂ ಅದಕ್ಕೆ ಕಾನೂನು ಕ್ರಮದ ಮೊರೆಹೋಗುವುದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸಮರ್ಥನೀಯವಲ್ಲ
ಈ ಹಲ್ಲೆ ಪ್ರಕರಣವು ಕೆಲವು ವ್ಯಕ್ತಿಗಳ ನಡುವಿನ ಘರ್ಷಣೆಯ ಹೊರತು ಜನಾಂಗಗಳ ನಡುವಿನ ಘರ್ಷಣೆಯಾಗಿರುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸುತ್ತಿದ್ದು, ಈ ಘಟನೆಯಲ್ಲಿ ಜನಾಂಗಗಳ ನಡುವಿನ ಘರ್ಷಣೆಯೆಂದು ಕೊಡಗಿನ ಜನತೆ ಬಿಂಬಿಸಬಾರದಾಗಿ ಮನವಿ ಮಾಡಿದ್ದಾರೆ.
ಆರ್ಚಕ ವಿಘ್ನೇಶ್ ಭಟ್ ಮೇಲೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧ ಬಿಗಿಯಾದ ಕಾನೂನು ಕ್ರಮ ಕೈಗೊಳ್ಳುವಂತೆ ಕೊಡವ ಟ್ರಸ್ಟ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತಿದ್ದು, ಕಟ್ಟೆಮಾಡು ದೇವಾಲಯದಲ್ಲಿ ವಾರ್ಷಿಕ ಹಬ್ಬದ ಸಮಯದಲ್ಲಿ ಕೊಡವ ಜನಾಂಗದ ಮೇಲೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳ ಮೇಲೆ ಇದುವರೆಗೂ ಕಾನೂನು ಕ್ರಮ ಕೈಗೊಂಡಿಲ್ಲ. ಪೋಲೀಸ್ ಇಲಾಖೆ ನಿರ್ಲಕ್ಷ್ಯ ತೋರಿದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
Kshetra Samachara
29/01/2025 01:07 pm