ವಿಶ್ವದ ನಂಬರ್ ಒನ್ ಆಟಗಾರ ಇಟಲಿಯ ಜಾನಿಕ್ ಸಿನ್ನರ್, ಆಸ್ಟ್ರೇಲಿಯನ್ ಓಪನ್ 2025ರ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ಎರಡನೇ ನಂಬರ್ ಒನ್ ಆಟಗಾರ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸಿ ತಮ್ಮ ಎರಡನೇ ಸತತ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು. ಸಿನ್ನರ್ ಎರಡು ಗಂಟೆ 42 ನಿಮಿಷಗಳಲ್ಲಿ 6-3, 7-6 (7-4), 6-3 ಅಂಕಗಳೊಂದಿಗೆ ಪಂದ್ಯವನ್ನು ಗೆದ್ದರು. ಇದರೊಂದಿಗೆ 3,500,000 ಆಸ್ಟ್ರೇಲಿಯನ್ ಡಾಲರ್ (ಸುಮಾರು 19 ಕೋಟಿ ರೂಪಾಯಿಗೂ ಹೆಚ್ಚು) ಬಹುಮಾನದ ಹಣವನ್ನು ಪಡೆದರು.
PublicNext
27/01/2025 08:40 am