", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1737910487-ho.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಮೈಕ್ರೊ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಒಳಗಾದ ಕುಟುಂಬಕ್ಕೆ ಶೀಘ್ರದಲ್ಲೇ ಸಹಾಯವಾಣಿ ಆರಂಭಿಸುವುದಾಗಿ ಜಿಲ್ಲಾ ಉಸ್...Read more" } ", "keywords": "Gadag, H.K. Patil, Karnataka Government, Law and Order, Social Issues, Money Collection, Harassment, Indian Politics, Karnataka News, Gadag News.,Politics", "url": "https://publicnext.com/node" } ಗದಗ: ಸಮಾಜದಲ್ಲಿ ಹಣ ವಸೂಲಿ ಮಾಡುವ ಕೆಟ್ಟ ವಾತಾವರಣ ನಿರ್ಮಾಣವಾಗಿದೆ - ಎಚ್.ಕೆ ಪಾಟೀಲ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸಮಾಜದಲ್ಲಿ ಹಣ ವಸೂಲಿ ಮಾಡುವ ಕೆಟ್ಟ ವಾತಾವರಣ ನಿರ್ಮಾಣವಾಗಿದೆ - ಎಚ್.ಕೆ ಪಾಟೀಲ

ಗದಗ: ಮೈಕ್ರೊ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಒಳಗಾದ ಕುಟುಂಬಕ್ಕೆ ಶೀಘ್ರದಲ್ಲೇ ಸಹಾಯವಾಣಿ ಆರಂಭಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಹೇಳಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಫೈನಾನ್ಸ್, ಬಡ್ಡಿ ಸಾಲ ಪಡೆದವನಿಗೆ ತೀವ್ರ ಗಾಯ ಆಗುವ ಹಾಗೆ ಹಲ್ಲೆ ಮಾಡಿದರು. ಈ ಬಗ್ಗೆ ಬೆಟಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದೆ ಏನು ಕ್ರಮ ವಹಿಸಬೇಕು. ಅದನ್ನು ಪೊಲೀಸರು ಮಾಡ್ತಾರೆ. ಆದಷ್ಟು ಬೇಗ ಗದಗನಲ್ಲಿ ಸಹಾಯವಾಣಿ ಆರಂಭವಾಗುತ್ತದೆ. ಫೈನಾನ್ಸ್ ಕಿರುಕುಳಕ್ಕೆ ಒಳಗಾದವರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಹಾಯವಾಣಿ ಆರಂಭಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.

ಬರುವ ಜನವರಿ 28ರಿಂದ ಗದಗನಲ್ಲಿ ಸಹಾಯ ವಾಣಿ ಕೇಂದ್ರ ಆರಂಭ ಮಾಡಲಾಗುತ್ತದೆ. ಇನ್ನು ರಾಜ್ಯದಲ್ಲಿ ನಡೆದ ಮೈಕ್ರೊ ಫೈನಾನ್ಸ್ ಅಕ್ರಮಕ್ಕೆ ಮೂಗುದಾರ ಹಾಕುವುದಾಗಿ ತಿಳಿಸಿದರು. ಸಮಾಜದಲ್ಲಿ ಹಣ ವಸೂಲಿ ಮಾಡುವ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಅದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸರ್ಕಾರ ಚಿಂತನೆ ನಡೆಸಿದೆ. ಗಟ್ಟಿಯಾದ, ಬಿಗುವಿನ, ಜನ್ರ ಗೌರವಕ್ಕೆ ದಕ್ಕೆ ಆಗದ ಹಾಗೆ ಅನುಕೂಲ ಆಗುವ ಕಾನೂನು ತರಲು, ಸುಗ್ರಿವಾಜ್ಞೆ ತರಲು ರಾಜ್ಯ ಸರ್ಕಾರ ಚಿಂತನೆ ಮಾಡಿದೆ. ಆದಷ್ಟು ಬೇಗ ಜಾರಿ ತರುತ್ತೆವೆ. ದಿನ ಬಡ್ಡಿ, ವಾರದ ಬಡ್ಡಿ, ತಿಂಗಳ ಬಡ್ಡಿ ಪದ್ಧತಿಗೆ ಕಡಿವಾಣ ಹಾಕುತ್ತೇವೆ. ಇದನ್ನೆಲ್ಲಾ ಶ್ರೀಮಂತರಿಂದ, ದೊಡ್ಡ ದೊಡ್ಡ ಕಾರ್ಖಾನೆ ಮಾಲೀಕರಿಂದ ತೆಗೆದುಕೊಳ್ಳುವುದಿಲ್ಲ. ದೊಡ್ಡವರಿಗೆ ರಿಯಾಯಿತಿ, ಕಂತು, ಮನ್ನಾ ಮಾಡುವುದು. ಅಷ್ಟೇ ಅಲ್ಲಾ ಸಾವಿರಾಕೋಟಿ ರೂಪಾಯಿ ಸಾಲ ಮಾಡಿದವರಿಗೆ ವಿದೇಶಕ್ಕೆ ಹೋಗಲು ಅವಕಾಶ ನೀಡುತ್ತಾರೆ. ಆದ್ರೆ ಬಡವರಿಗೆ ನೂರಾರು ರೂಪಾಯಿಗೆ ಹೊಡೆತ, ಬಡೆತ ತಿನ್ನುವ ಪ್ರಸಂಗ ನಡೆಯುತ್ತಿದೆ. ಬಡವರಿಗೆ ಮಾತ್ರ ಅವಮಾನ ಆಗುವುದನ್ನು ನೋಡುತ್ತಿದ್ದೇವೆ ಎಂಬ ಬೇಸರ ವ್ಯಕ್ತಪಡಿಸಿದರು. ಈಗಿನ ಪರಿಸ್ಥಿತಿ ಗಮನಿಸಿ, ಬಡವರ ರಕ್ಷಣೆಗೆ ಹೊಸ ಕಾನೂನು ತರುತ್ತೇವೆ ಎಂದರು.

Edited By : Vinayak Patil
PublicNext

PublicNext

26/01/2025 10:25 pm

Cinque Terre

41.51 K

Cinque Terre

1

ಸಂಬಂಧಿತ ಸುದ್ದಿ