ಹರಿಯಾಣ : ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಅವರ ಅಜ್ಜಿ ಹಾಗೂ ಅಂಕಲ್ ರಸ್ತೆ ಅಪಘಾತದಲ್ಲಿ ದುರಂತವಾಗಿ ಸಾವಿಗೀಡಾಗಿದ್ದಾರೆ. ಹರಿಯಾಣದ ಚಕ್ರಿದಾದ್ರಿಯಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ ಮನು ಭಾಕರ್ ಅಜ್ಜಿ ಹಾಗೂ ಅಂಕಲ್ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುತ್ತಿರುವಾಗ ಕಾರ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ.
ಕಾರ್ ಮತ್ತು ಸ್ಕೂಟಿ ನಡುವಿನ ಡಿಕ್ಕಿಯಿಂದಾಗಿ ಈ ಭೀಕರ ಅಪಘಾತ ಸಂಭವಿಸಿದೆ. ಸ್ಕೂಟಿಯಲ್ಲಿದ್ದ ಇಬ್ಬರೂ ವ್ಯಕ್ತಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಎಎಸ್ಐ ಸುರೇಶ್ ಕುಮಾರ್ ತಿಳಿಸಿದ್ದಾರೆ. ಸದ್ಯ ಕಾರ್ನಲ್ಲಿದ್ದ ಡ್ರೈವರ್ ಎಸ್ಕೇಪ್ ಆಗಿದ್ದು. ಆತನಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
PublicNext
19/01/2025 04:49 pm