ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ಪಾಳು ಬಿದ್ದ ಮನೆಗೆ ಬೆಂಕಿ ಬಿತ್ತು!- ನೆರೆಮನೆಯವರು ಪ್ರಾಣಾಪಾಯದಿಂದ ಪಾರು

ನಂಜನಗೂಡು: ಪಾಳು ಬಿದ್ದ ಮನೆಗೆ ಬೆಂಕಿ ಬಿದ್ದು ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡು ನಗರದ ತ್ಯಾಗರಾಜ ಕಾಲೋನಿಯ ಎರಡನೇ ತಿರುವಿನಲ್ಲಿರುವ ಗೋವಿಂದರಾಜು ಎಂಬುವರಿಗೆ ಸೇರಿದ ಮನೆಯಾಗಿದ್ದು, ಹಲವು ವರ್ಷಗಳಿಂದ ಹೆಂಚಿನ ಮನೆ ಪಾಳು ಬಿದ್ದಿದೆ ಎನ್ನಲಾಗಿದೆ.

ಹೆಂಚಿನ ಮನೆಗೆ ಬೆಂಕಿ ಬಿದ್ದು ಹೊಗೆ ಕಾಣಿಸಿಕೊಂಡಿದೆ. ಅಕ್ಕಪಕ್ಕದ ಮನೆಗಳಿಗೂ ಬೆಂಕಿಯ ಕಾವು ತಟ್ಟಿದೆ. ನೆರೆಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರೋ ವ್ಯಕ್ತಿಗಳು ಪಾಳು ಬಿದ್ದ ಮನೆಯಲ್ಲಿ ಧೂಮಪಾನ ಮಾಡಿ ಹೋಗಿದ್ದಾರೆ. ಹಾಗಾಗಿ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಠಾಣಾಧಿಕಾರಿ ಚೆಲುವರಾಜು ತಿಳಿಸಿದ್ದಾರೆ.

ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಚೆಲುವರಾಜು, ಸಿಬ್ಬಂದಿ ಬಸಪ್ಪ, ರಘುನಂದನ್, ವಿಶ್ವನಾಥ್, ರಾಹುಲ್, ಮಂಜುನಾಥ್, ಪಿ. ಆರಾಧ್ಯ ಭಾಗವಹಿಸಿದ್ದರು.

Edited By : Somashekar
PublicNext

PublicNext

17/01/2025 07:06 pm

Cinque Terre

25.49 K

Cinque Terre

0