ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಗುರುವಾರ ನಸುಕಿನಲ್ಲಿ ನಡೆದ ದಾಳಿಯ ಸುದ್ದಿ ಎಲ್ಲೆಡೆ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೆ ಚಾಕು ಇರಿದ ಕಿರಾತಕನದ್ದೇ ಎನ್ನಲಾದ ಸಿಸಿಟಿವಿ ದೃಶ್ಯದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಂಕಿತ ಮೆಟ್ಟಿಲುಗಳಿಂದ ಕೆಳಗೆ ಓಡಿಹೋದ ಚಲನವಲನಗಳು ಸೆರೆಯಾಗಿದೆ.
ಈ ದಾಳಿಯು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಅತೀ ಭದ್ರತೆ ಇದ್ದರೂ ಕೂಡಾ, ಆ ಆಗುಂತಕ ಮನೆಯೊಳಗೆ ಬಂದಿದ್ದಾರೂ ಹೇಗೆ ? ಸಿಸಿಟಿವಿ ಕ್ಯಾಮರಾದಲ್ಲಿನ ದೃಶ್ಯಗಳ ಬಗ್ಗೆ ತನಿಖೆ ಬಳಿಕವೇ ಸತ್ಯಾಸತ್ಯತೆ ಹೊರಬೀಳಬೇಕಿದೆ.
ಸದ್ಯ ಮುಂಬೈನ ಲೀಲಾವತಿ ಆಸ್ಪತ್ರೆಯ ಮಾಹಿತಿಯ ಪ್ರಕಾರ, ಬಾಲಿವುಡ್ ನಟ ಅಪಾಯದಿಂದ ಪಾರಾಗಿದ್ದಾರೆ. ನಸುಕಿನ ಸುಮಾರು ಮೂರು ಗಂಟೆಗೆ ಆರಂಭವಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
PublicNext
16/01/2025 06:15 pm