ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಾಜಿ ಸಚಿವ, ಉದ್ಯಮಿ ಕೃಷ ಜೇ ಪಾಲೇಮಾರ್ ಅವರ ಸೇವೆಯಾಟ, ಕಟೀಲು ಮೇಳದ ಯಕ್ಷಗಾನ ಪ್ರದರ್ಶನ...

ಮಂಗಳೂರು:ಕಟೀಲಿನ 5 ನೇ ಮೇಳದಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಗರದ ಮೋರ್ಗನ್ ಗೇಟ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ಪಾಲೇಮಾರ್ ಗಾರ್ಡನ್ ನಲ್ಲಿ ಬುಧವಾರ ಸಂಜೆ ನಡೆಯಿತು. ಮಾಜಿ ಸಚಿವರು ಹಾಗೂ ಉದ್ಯಮಿ ಕೃಷ ಜೇ ಪಾಲೇಮಾರ್ ರವರು ಸೇವಾರೂಪದಲ್ಲಿ ಕಟೀಲು ಮೇಳದ ಯಕ್ಷಗಾನವನ್ನು ಆಡಿಸಿದ್ದಾರೆ.

ಸಂಜೆ 6.30 ಕ್ಕೆ ಸರಿಯಾಗಿ ಚೌಕಿ ಪೂಜೆ ನಡೆದ ಬಳಿಕ ಯಕ್ಷಗಾನ ಪ್ರದರ್ಶನ ಆರಂಭವಾಯಿತು.ಸಂಸದ ಬ್ರಿಜೇಶ್ ಚೌಟ, ಮಾಜಿ ‌ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ್ ಕಾಮತ್, ಉಮಾನಾಥ ಕೋಟ್ಯಾನ್, ಮಾಜಿ ಶಾಸಕರಾದ ಜೆ ಅರ್ ಲೊಬೋ,ರಘುಪತಿ ಭಟ್ ಸೇರಿದಂತೆ ಹಲವು ಮಂದಿ ಕಟೀಲು ದೇವಿಯ ಗಂಧ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮೇಳದ ಪ್ರಮುಖರಿಗೆ ಗೌರವ ಸನ್ಮಾನ ಹಾಗೂ ತಂದೆ,ತಾಯಿ ಇಲ್ಲದ ಮಕ್ಕಳಿಬ್ಬರಿಗೆ ಸಹಾಯ ಹಸ್ತವನ್ನು ನೀಡಲಾಯಿತು..

Edited By : Somashekar
Kshetra Samachara

Kshetra Samachara

16/01/2025 04:05 pm

Cinque Terre

1.58 K

Cinque Terre

0

ಸಂಬಂಧಿತ ಸುದ್ದಿ