ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ : ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಮನೆಗೆ ಹೋಗುವಾಗ ಆಗಿದ್ದೇನು ನೋಡಿ

ಬಳ್ಳಾರಿ : ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಮನೆಗೆ ಹೋಗುವಾಗ ಖದೀಮ ಕೈ ಚಳಕ ತೋರಿದ್ದಾನೆ.. 6 ಲಕ್ಷ ಹಣದ ಬ್ಯಾಗ್ ಖದ್ದು ಪರಾರಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದಲ್ಲಿ‌ ನಡೆದಿದೆ. ಪುಲ್ಲಂರಾಜು ಎಂಬವರಿಗೆ ಸೇರಿದ ಹಣ ಅಂತ ತಿಳಿದು ಬಂದಿದೆ. SBI ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಗ್ರಾಮಕ್ಕೆ ತೆರಳುತ್ತಿದ್ದ ಪುಲಂರಾಜು ಕಾರು ದಾರಿ ಮಧ್ಯೆ ಪಂಚರ್ ಆಗುತ್ತೆ.

ಪಂಚರ್ ಶಾಪ್‌ ಮುಂದೆ ಹಣ ಸಮೇತ ಪುಲ್ಲಂರಾಜು ಕುಳಿತಿರುತ್ತಾರೆ. ಹೊಂಚು ಹಾಕಿ‌ ಹಣದ ಬ್ಯಾಗ್ ಖದೀಮ ಎಗರಿಸಿದ್ದಾನೆ. ಬ್ಯಾಂಕ್‌ನಿಂದಲೇ ಪುಲ್ಲಂ‌ರಾಜು ಅವ್ರನ್ನ ಪಾಲೋ‌ ಮಾಡಿಕೊಂಡು ಬಂದಿದ್ದ ಕಳ್ಳ ಸ್ಕೆಚ್ ಹಾಕಿ ಕದ್ದಿರುವುದು ಗೊತ್ತಾಗ್ತಾ ಇದೆ. ಹಣ ಖದ್ದು ಪರಾರಿ ಆಗೋ ದೃಶ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.

Edited By : Shivu K
PublicNext

PublicNext

09/01/2025 09:55 am

Cinque Terre

55.9 K

Cinque Terre

0