ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ಊರು, ಸಮಾಜ, ಕುಟುಂಬಕ್ಕಾಗಿ ಯೋಜಿಸಿ ಕಾರ್ಯನಿರ್ವಹಿಸಿ - ಡಾ.ಎಂ.ಎಸ್.ಮೂಡಿತ್ತಾಯ

ಶಿವಮೊಗ್ಗ : ವಿಕಸಿತ ಭಾರತದ ಪ್ರಜೆಗಳಾಗಿ ಜಾಗತೀಕವಾಗಿ ಯೋಚಿಸುತ್ತಾ ಸ್ಥಳೀಯವಾಗಿ ನಮ್ಮ ಊರು, ಸಮಾಜ, ಕುಟುಂಬಕ್ಕಾಗಿ ಯೋಜಿಸಿ ಕಾರ್ಯನಿರ್ವಹಿಸಿ ಎಂದು ಮಂಗಳೂರು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಅಭಿಪ್ರಾಯಪಟ್ಟರು.

ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಅಂತಿಮ ವರ್ಷದ ಫಾರ್ಮಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು ಪದವಿ ಪ್ರದಾನ ಎಂಬುದು ಬದುಕಿನಲ್ಲಿ ಹೊಸ ದೀಕ್ಷೆ ತೊಡುವ ಸುಸಂದರ್ಭ. ಸ್ವಾರ್ಥದ ಆಲೋಚನೆಗಳಿಗಿಂತ, ನಮ್ಮ ಸಮಾಜದ ಒಳಿತಿನಲ್ಲಿ ನಿಮ್ಮ ಅಭಿವೃದ್ಧಿಯನ್ನು ಕಾಣಿರಿ. ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿರಲಿ.

ಬದುಕಿನ ನಿನ್ನೆ ಇತಿಹಾಸವಾದರೆ, ನಾಳೆ ನಮ್ಮಯ ಭವಿಷ್ಯ. ಇತಿಹಾಸ ಅನ್ವೇಷಣೆಯಲ್ಲಿ ಆದ ಜೀವನ ಅನುಭವಗಳಿಂದ ಭವಿಷ್ಯದ ಗುರಿಯನ್ನು ತಲುಪಲು ಪ್ರಯತ್ನಿಸಿ. ಪ್ರಕೃತಿಯಲ್ಲಿ ಯಾರು ಮುಖ್ಯ, ಅಮುಖ್ಯರೆಂಬ ಸಂಕೇತ ಇರುವುದಿಲ್ಲ. ಎಲ್ಲಾ ಕೆಲಸ ಕಾರ್ಯಗಳು, ವ್ಯಕ್ತಿತ್ವಗಳು ತನ್ನದೇ ಮಹತ್ವವನ್ನು ಪಡೆದಿದೆ. ಬೌದ್ಧಿಕ ಬಂಡವಾಳ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದರು.

Edited By : Nirmala Aralikatti
Kshetra Samachara

Kshetra Samachara

26/12/2024 08:30 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ