ಪಾಟ್ನಾ: ಬಿಹಾರ ಶಿಕ್ಷಣ ಇಲಾಖೆಯು ಹಾಜಿಪುರದ ಪುರುಷ BPSC ಶಿಕ್ಷಕನನ್ನು ಗರ್ಭಿಣಿ ಎಂದು ಘೋಷಿಸಿ ಹೆರಿಗೆ ರಜೆಯನ್ನು ಅನುಮೋದಿಸಿ ಭಾರೀ ಎಡವಟ್ಟು ಮಾಡಿಕೊಂಡಿದೆ.
ಹೌದು. ಹಾಜಿಪುರ ಮಹುವಾ ಬ್ಲಾಕ್ ಪ್ರದೇಶದ ಹಸನ್‌ಪುರ ಒಸಟಿ ಪ್ರೌಢಶಾಲೆಯಲ್ಲಿ ನಡೆದಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಪಿಎಸ್‌ಸಿಯಿಂದ ಆಯ್ಕೆಯಾದ ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಅವರನ್ನು ಶಿಕ್ಷಣ ಇಲಾಖೆ ಗರ್ಭಿಣಿ ಎಂದು ಘೋಷಿಸಿದೆ.
ಇಲಾಖೆಯ ಪೋರ್ಟಲ್ ಇ-ಶಿಕ್ಷಾ ಕೋಶ್‌ನಲ್ಲಿ ಜಿತೇಂದ್ರ ಕುಮಾರ್ ಸಿಂಗ್ ಅವರಿಗೆ ಹೆರಿಗೆ ರಜೆ ನೀಡಿದ್ದು, ಇದೀಗ ಬಯಲಿದೆ ಬಂದಿದೆ.
ಇಂಥದ್ದೊಂದು ನಗೆಪಾಟಲಿನ ಪ್ರಮಾದ ಹೊರಬಿದ್ದ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಜುಗರಕ್ಕೀಡಾಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಚನಾ ಕುಮಾರಿ ಅವರು, ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಅವರ ಹೆಸರನ್ನು ಇಲಾಖೆಯ ಪೋರ್ಟಲ್‌ನಲ್ಲಿ ತಪ್ಪಾಗಿ ಸೇರಿದೆ. ಅದನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದಿದ್ದಾರೆ.
PublicNext
25/12/2024 07:46 am