ವಿಜಯಪುರ : ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೆ ಮಹೂರ್ತ್ ಫಿಕ್ಸ್ ಆಗಿದೆ. ಹೌದು.. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ 2025 ಫೆಬ್ರುವರಿ 4 ರಂದು ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೊಳ್ಳಲಿದೆ.
ಬ್ರಿಗೇಡ್ ಉದ್ಘಾಟನೆಗೆ ಕ್ರಾಂತಿ ಪುರುಷ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯ ಗುರುಕೃಪಾ ಶಾಲೆಯ ಪಕ್ಕದ ವಿಶಾಲದ ಮೈದಾನವನ್ನ ನಿಗದಿ ಪಡಿಸಲಾಗಿದ್ದು, ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಸೇರಿದಂತೆ ವಿವಿಧ ಮಠಾಧೀಶರು ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಉದ್ಘಾಟನೆಗೆ ಸಕಲ ಸಿದ್ದತೆಯನ್ನ ಮಾಡಿಕೊಳ್ಳುತ್ತಿದ್ದಾರೆ.
ಇನ್ನೂ ಕ್ರಾಂತಿವೀರ ಬ್ರಿಗೇಡ್‌ನ ರಾಜ್ಯ ಅಧ್ಯಕ್ಷರಾಗಿ ಬಸವರಾಜ ಬಾಳಿಕಾಯಿ ಕಾರ್ಯಧ್ಯಕ್ಷರಾಗಿ ಕೆ, ಕಾಂತೇಶ ಈಶ್ವರಪ್ಪ ಆಯ್ಕೆಯಾಗಿರುವದು ಕುತೂಹಲಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಹಿಂದೂ ಧರ್ಮ ರಕ್ಷಣೆಗಾಗಿ ರಾಷ್ಟ್ರೀಯ ಜಾಗೃತೆಗಾಗಿ ಕ್ರಾಂತಿವೀರ ಬ್ರಿಗೇಡ್ ಸಂಘಟನೆ ಹುಟ್ಟಿಕೊಂಡದೆ ಎನ್ನಲಾಗಿದೆ.
ಸದ್ಯ ಬ್ರಿಗೇಡ್‌ನ ಕಾರ್ಯಾಧ್ಯಕ್ಷರಾಗಿ ಈಶ್ವರಪ್ಪನವರ ಮಗ ಕಾಂತೇಶ ಅವರ ಆಯ್ಕೆ ಬಾರಿ ಕುತೂಹಲ ಮೂಡಿಸಿದೆ.
ಕ್ರಾಂತಿವೀರ ಬ್ರಿಗೇಡ್ ಭವಿಷ್ಯದಲ್ಲಿ ನೊಂದವರ ಧ್ವನಿ ಯಾಗುತ್ತದೆಯೋ ಅಥವಾ ಕಾಂತೇಶ ಅವರ ರಾಜಕೀಯ ಭವಿಷ್ಯ ರೂಪಿಸುವ ವೇದಿಕೆಯಾಗುತ್ತದೆಯೋ ಕಾದು ನೋಡಬೇಕಾಗಿದೆ.
PublicNext
19/12/2024 10:24 pm