ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಚುನಾವಣಾ ವ್ಯವಸ್ಥೆಗೆ ಟೆಸ್ಲಾ ಸಿಇಓ ಎಲಾನ್ ಮಸ್ಕ್ ಮೆಚ್ಚುಗೆ

ನವದೆಹಲಿ: ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ಟೆಸ್ಲಾ ಸಿಇಓ ಎಲಾನ್ ಮಸ್ಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶನಿವಾರ ಈ ಸಂಬಂಧ ಅವರು ಮಾಡಿದ ಟ್ವೀಟ್ ಗಮನಸಳೆದಿದೆ. ಒಂದೇ ದಿನದಲ್ಲಿ ಚುನಾವಣಾ ಫಲಿತಾಂಶ ಪ್ರಕಟಿಸುವ ಉತ್ತಮ ಸಾಮರ್ಥ್ಯಕ್ಕಾಗಿ ಭಾರತದ ಚುನಾವಣಾ ವ್ಯವಸ್ಥೆಯನ್ನು ಅವರು ಶ್ಲಾಘಿಸಿದರು.

"ಭಾರತವು ಒಂದು ದಿನದಲ್ಲಿ 64 ಕೋಟಿ ಮತಗಳನ್ನು ಹೇಗೆ ಎಣಿಸಿತು" ಎಂಬ ಶೀರ್ಷಿಕೆಯ ಸುದ್ದಿ ಲೇಖನವನ್ನು ಹಂಚಿಕೊಂಡ ಎಕ್ಸ್‌ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಮಸ್ಕ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಕ್ಷೀಪ್ರ ಮತ ಎಣಿಕೆ ಎಕ್ಸ್‌ ಪೋಸ್ಟ್ ಅನ್ನು ಉಲ್ಲೇಖಿಸಿ, "ಭಾರತವು 1 ದಿನದಲ್ಲಿ 640 ಮಿಲಿಯನ್ ಮತಗಳನ್ನು ಎಣಿಸಿದೆ. ಕ್ಯಾಲಿಫೋರ್ನಿಯಾ ಇನ್ನೂ ಮತಗಳನ್ನು ಎಣಿಕೆ ಮಾಡುತ್ತಿದೆ" ಎಂಬ ಮಸ್ಕ್ ಅವರ ಪ್ರತಿಕ್ರಿಯೆಯು ನೇರವಾಗಿದ್ದರೂ ತೀಕ್ಷ್ಣವಾಗಿದೆ. ಅವರ ಹೇಳಿಕೆಯು ಕ್ಯಾಲಿಫೋರ್ನಿಯಾದಲ್ಲಿ ವಿಳಂಬವಾದ ಚುನಾವಣಾ ಫಲಿತಾಂಶಗಳಲ್ಲಿ ಸ್ಪಷ್ಟವಾದ ವ್ಯಂಗ್ಯದ ಟೀಕೆಯಾಗಿದ್ದು, ಭಾರತ ಮತ್ತು ಯುಎಸ್ ರಾಜ್ಯದ ನಡುವಿನ ಮತ ಎಣಿಕೆಯ ವ್ಯತಿರಿಕ್ತ ವೇಗದ ಕಡೆಗೆ ಗಮನ ಸೆಳೆದಿದೆ.

ಕ್ಯಾಲಿಫೋರ್ನಿಯಾದಲ್ಲಿ ಮತದಾನ ನಡೆದು 18 ದಿನಗಳಾದರೂ ಇನ್ನೂ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ ಎಂಬ ವಿಚಾರ ಬಹಳ ಚರ್ಚೆಗೆ ಒಳಗಾಗಿದೆ. ಅಮೇರಿಕಾದ ಕ್ಯಾಲಿಫೋರ್ನಿಯಾ ಚುನಾವಣೆ ಪ್ರಕ್ರಿಯೆ ನಿಧಾನ ಯಾಕೆ? ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ 3.9 ಕೋಟಿ ಜನರಿದ್ದಾರೆ. ಇದು ಅಮೇರಿಕಾದ ಅತೀ ಹೆಚ್ಚು ಜನಸಂಖ್ಯೆ ಇರುವ ರಾಜ್ಯ ಎಂದು ಖ್ಯಾತಿ ಪಡೆದಿದೆ. ನವೆಂಬರ್ 5 ರಂದು ಚುನಾವಣೆ ನಡೆದಿದ್ದು, 1.6 ಕೋಟಿ ಮತದಾರರು ಮತಚಲಾಯಿಸಿದ್ದಾರೆ. ಈವರೆಗೆ ಕ್ಯಾಲಿಫೋರ್ನಿಯಾದಲ್ಲಿ 3 ಲಕ್ಷಕ್ಕೂ ಹೆಚ್ಚು ಮತಗಳು ಎಣಿಕೆಯಾಗಿಲ್ಲ. ಲಾಸ್ ಏಂಜಲೀಸ್ ಟೈಮ್ಸ್ ವರದಿ ಪ್ರಕಾರ, 5.7 ಲಕ್ಷಕ್ಕೂ ಹೆಚ್ಚು ಮತಗಳು ಎಣಿಕೆಯಾಗಬೇಕಿದೆ.

ಕ್ಯಾಲಿಫೋರ್ನಿಯಾದಲ್ಲಿ ಮತ ಎಣಿಕೆ ವಿಳಂಬವಾಗುವುದಕ್ಕೆ ಮುಖ್ಯವಾಗಿ ಮೇಲ್‌ ಇನ್ ಮತದಾನ ಪ್ರಕ್ರಿಯೆ ಕಾರಣ. ವ್ಯಕ್ತಿಗತ ಮತದಾನಕ್ಕಿಂತ ಇದು ಭಿನ್ನ. ವ್ಯಕ್ತಿಗತ ಮತದಾನದಲ್ಲಿ ಮತಗಳನ್ನು ಬೇಗ ಲೆಕ್ಕ ಹಾಕಬಹುದು. ಮೇಲ್ ಇನ್ ಮತದಾನದಲ್ಲಿ ಪ್ರತಿ ಮೇಲ್‌ ಇನ್ ಬ್ಯಾಲೆಟ್‌ ವೈಯಕ್ತಿಕ ಮೌಲ್ಯೀಕರಣ ಮತ್ತು ಪ್ರತ್ಯೇಕ ಪ್ರಕ್ರಿಯೆ ಬೇಕು. ಇದು ವಿಳಂಬಕ್ಕೆ ಮುಖ್ಯ ಕಾರಣ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಅಮೇರಿಕಾದ ಕ್ಯಾಲಿಫೋರ್ನಿಯಾ ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿದೆ. ರಾಜ್ಯದ ಮತದಾರರ ಸಂಖ್ಯೆ ಮತ್ತು ಮೇಲ್-ಇನ್ ಮತಗಳ ಪ್ರಮಾಣವು ನಿಧಾನ ಎಣಿಕೆಗೆ ಕೊಡುಗೆ ನೀಡುತ್ತದೆ. ಇದರ ಹೊರತಾಗಿಯೂ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಚುನಾವಣಾ ಫಲಿತಾಂಶಗಳಿಗೆ ರಾಜ್ಯವು ನಿರ್ಣಾಯಕ. ಇದು ಫಲಿತಾಂಶಗಳನ್ನು ಅಂತಿಮಗೊಳಿಸುವಲ್ಲಿ ವಿಳಂಬಕ್ಕೂ ಕಾರಣವಾಗಿದೆ. ಈ ಎಲ್ಲ ಅಂಶಗಳನ್ನು ಎಕ್ಸ್ ಪೋಸ್ಟ್‌ನಲ್ಲಿ ಎಲಾನ್ ಮಸ್ಕ್ ಪೋಸ್ಟ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

24/11/2024 08:52 pm

Cinque Terre

43.34 K

Cinque Terre

0

ಸಂಬಂಧಿತ ಸುದ್ದಿ