ನ್ಯೂಯಾರ್ಕ್ : ಮಹಿಳೆಯೋರ್ವಳು ತನ್ನ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಆಕೆಯ ಪತಿ ಬೇರೆ ಮಹಿಳೆಯೊಂದಿಗೆ ಎರಡು ವರ್ಷಗಳ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾನೆ. ಈ ವಿಚಾರ ತಿಳಿದ ಮಹಿಳೆ ಗಂಡನಿಗೆ ಸರಿಯಾಗಿಯೇ ಬುದ್ದಿ ಕಲಿಸಿದ್ದಾಳೆ.
ಆ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಗಂಡನಿಂದ ವಂಚನೆಗೊಳಗಾದ ಪತ್ನಿಯು ಆತನ ಕುತ್ತಿಗೆಗೆ "ನಾನು ಎರಡು ವರ್ಷಗಳಿಂದ ಅನೈತಿಕ ಸಂಬಂಧವನ್ನು ಹೊಂದಿದ್ದೆ' ಎಂದು ಘೋಷಿಸುವ ಬಹುದೊಡ್ಡ ಬೋರ್ಡನ್ನು ನೇತು ಹಾಕಿ ಬೀದಿ ಬೀದಿ ಅಲೆದಾಡುವಂತೆ ಮಾಡಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಆ ಮೂಲಕ ತನ್ನ ಮೋಸಗಾರ ಪತಿಯ ವಿರುದ್ಧ ಸೇಡು ತೀರಿಸಿಕೊಂಡಿದ್ದಾಳೆ.
ನ್ಯೂಯಾರ್ಕ್‌ನ ವಾಲ್ಟ್ ವಿಟ್‌ಮಿನ್ ಮಾಲ್‌ನಲ್ಲಿ ಈ ಬೋರ್ಡನ್ನು ಕುತ್ತಿಗೆಗೆ ತಗುಲಿ ಹಾಕಿಕೊಂಡು ಪತಿಯು ಸಾರ್ವಜನಿಕವಾಗಿ ಎಲ್ಲಾ ಕಡೆ ನಡೆದಾಡಿದ್ದಾನೆ. ತಾನು ಮಾಡಿದ ಮೂರ್ಖತನದ ಕೆಲಸಕ್ಕೆ ಏನೂ ಮಾತನಾಡದೆ ಅಸಡ್ಡೆತನದಿಂದ ಪತ್ನಿಯ ಜೊತೆಗೆ ಹೆಜ್ಜೆ ಹಾಕಿದ್ದಾನೆ.
ಮೋಸ ಮಾಡುವ ಗಂಡಂದಿರು ಮತ್ತು ಮೋಸಕ್ಕೆ ಒಳಗಾಗುವ ಪತ್ನಿಯರು ನೋಡಲಿ ಎಂಬ ಕಾರಣಕ್ಕೆ ತನ್ನ ಪತಿಯ ಕುತ್ತಿಗೆಗೆ ನಾಮಫಲಕ ಹಾಕಿ ಮಾಲ್ ಪೂರಾ ಸುತ್ತಾಡಿಸಿದ್ದಾಳಂತೆ. ತನ್ನ ಮೋಸಗಾರ ಪತಿಯನ್ನು ಜನರೆದುರು ಹೀಯಾಳಿಸುತ್ತಾ, ಮಾಲ್‌ನಲ್ಲಿ ತಿರುಗಾಡುವವರನ್ನು ಹತ್ತಿರಕ್ಕೆ ಕರೆದು "ನೀವು ಆರಾಮವಾಗಿರಿ. ಇವನು ಮೋಸಗಾರ. ಅದಕ್ಕೆ ಹೀಗೆ ಮಾಡಿದ್ದೇನೆ. ಇನ್ನು ಈ ಬೋರ್ಡನಲ್ಲಿ " # thespurnedbxtch" ಎಂಬ ಹ್ಯಾಶ್ ಟ್ಯಾಗನ್ನೂ ಹಾಕಲಾಗಿದೆ.
PublicNext
24/11/2024 02:35 pm