ಉತ್ತರ ಪ್ರದೇಶ : ಮದುವೆ ಮರವಣಿಗೆ ವೇಳೆ ಅತಿಥಿಗಳು 20 ಲಕ್ಷ ರೂ ಖರ್ಚು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶ ದ ಸಿದ್ಧಾರ್ಥನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋ ಅಫ್ಜಲ್ ಮತ್ತು ಅರ್ಮಾನ್ ಮದುವೆಯದ್ದು ಎನ್ನಲಾಗಿದೆ.
ವಿಡಿಯೋದಲ್ಲಿ ವರನ ಕಡೆಯಿಂದ ಬಂದ ಅತಿಥಿಗಳು ಮನೆಗಳ ಮೇಲೆ ನಿಂತುಕೊಂಡು ಜೆಸಿಬಿ ಮೇಲೆ ನೋಟುಗಳ ಬಂಡಲ್ಗಳನ್ನು ಹಾರಿಸಿದ್ದಾರೆ. ಈ ವೇಳೆ 100, 200 ಹಾಗೂ 500 ನೋಟುಗಳು ಕಂಡುಬಂದಿದೆ. ಈ ಎಲ್ಲಾ ನೋಟುಗಳನ್ನು ಹಳ್ಳಿಯ ಜನರು ಲೂಟಿ ಮಾಡುತ್ತಿರುವುದು ವಿಡಿಯೋದಲ್ಲಿದೆ.
ಈ ವಿಡಿಯೋಗೆ ಅಂತರ್ಜಾಲದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ನೆಟ್ಟಿಗರು ಹಣವನ್ನು ಅಗತ್ಯವಿರುವವರಿಗೆ ಹಂಚಲು ಸಲಹೆ ನೀಡಿದರೆ, ಇತರರು ಆದಾಯ ತೆರಿಗೆ ಕಚೇರಿಗೆ ಕರೆ ಮಾಡಲು ಹೇಳಿದರು. ಮತ್ತೊಬ್ಬರು ಇಷ್ಟು ಹಣದಲ್ಲಿ 4 ಬಡ ಹುಡುಗಿಯರನ್ನು ಮದುವೆಯಾಗಬಹುದಿತ್ತು ಎಂದು ಹೇಳಿದರು.
PublicNext
20/11/2024 02:22 pm