ಹೊಸೂರು : ನ್ಯಾಯಾಲಯದ ವಕೀಲರ ಹತ್ಯೆಯನ್ನು ಖಂಡಿಸಿ ಮಡಿಕೇರಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ ಇಂಥ ಪ್ರಕರಣಗಳು ಮರುಕಳಿಸದ ನಿಟ್ಟಿನಲ್ಲಿ ವಕೀಲ ವೃಂದಕ್ಕೆ ಸೂಕ್ತ ರೀತಿಯ ಕಾನೂನು ರಕ್ಷಣೆ ನೀಡುವಂತೆ ಆಗ್ರಹಿಸಲಾಯಿತು.
ನಗರದ ನ್ಯಾಯಾಲಯ ಸಂಕೀಣ೯ದ ಮುಂದೆ ಪ್ರತಿಭಟನೆ ನಡೆಸಿದ ವಕೀಲರನ್ನುದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಂ ಎ ನಿರಂಜನ್, ಎರಡು ದಿನಗಳ ಹಿಂದೆ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಹೊಸೂರು ನ್ಯಾಯಲಯದ ಆವರಣದಲ್ಲಿ ವಕೀಲ ಕಣ್ಣನ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಇಂದಿನ ದಿನಗಳಲ್ಲಿ ನ್ಯಾಯಾಲಯದ ಅಧಿಕಾರಿಗಳಾಗಿರುವ ವಕೀಲರು ಭಯದ ವಾತವರಣದಲ್ಲಿ ಕೆಲಸ ನಿರ್ವಹಿಸುವಂತ್ತಾಗಿದೆ , ವಕೀಲರಿಗೆ ಸೂಕ್ತ ರಕ್ಷಣೆಯ ಕೊರತೆಯಿಂದಾಗಿ ಇಂತಹ ಘಟನೆಗಳು ಮರುಕಳುಹಿಸುತ್ತಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವವರು. ಈ ದಿಸೆಯಲ್ಲಿ ವಕೀಲರುಗಳಿಗೆ ಸೂಕ್ತ ರಕ್ಷಣೆಯನ್ನು ನೀಡುವಂತಾಗಬೇಕು. ಕೃತ್ಯ ಎಸಗಿದ ಅಪರಾಧಿಗೆ ಶೀಘ್ರ ನ್ಯಾಯಾಂಗ ವಿಚಾರಣೆಯಾಗಿ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
PublicNext
22/11/2024 10:48 pm