ಚಳ್ಳಕೆರೆ : ಬದುಕು ದಾರಿದೀಪವಾಗುವ ಶ್ರೀ ರಾಮಾಯಣ ಕಾವ್ಯದ ಅಂಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಶ್ರೀ ರಾಮಾಯಣ ಬದುಕಿಗೆ ದಾರಿದೀಪವಾಗಿದೆ ಎಂದು ನಿವೃತ್ತ ತಹಶಿಲ್ದಾರ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು.
ತಾಲ್ಲೂಕಿನ ತಳಕು ಹೋಬಳಿಯ ಮೈಲನಹಳ್ಳಿ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಯುವಕ ಸಂಘ ಹಾಗೂ ವಾಲ್ಮೀಕಿ ನಾಯಕರ ಸಮುದಾಯದ ವತಿಯಿಂದ ಹಮ್ಮಿಕೊಂಡಿ ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಶ್ರೀ ವಾಲ್ಮೀಕಿ ವಿಗ್ರಹಕ್ಕೆ ಪುಷ್ಪಮಾಲಿಕೆಯನ್ನು ಅರ್ಪಿಸಿ ನಂತರ ಸಭೆಯ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು.
ಮಹರ್ಷಿ ವಾಲ್ಮೀಕಿ ಅವರನ್ನು ಪ್ರತಿಯೊಬ್ಬರು ನೆರೆಯುವಂತಾಗಬೇಕು ಅವರ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ದೇಶದಲ್ಲಿ ಇಂದು ಲಕ್ಷಾಂತರ ಜನರು ರಾಮಾಯಣ ಮಹಾಭಾರತವನ್ನು ಓದಿ ತಿಳ್ಕೊಂಡಿದ್ದಾರೆ . ಈ ರಾಮಾಯಣ ಮಹಾಭಾರತದಲ್ಲಿ ಜೀವನಕ್ಕೆ ಬೇಕಾಗುವಂತಹ ಸಾಕಷ್ಟು ಸಂದೇಶಗಳನ್ನು ನೀಡಲಾಗಿದೆ. ಇಂತಹ ಸಂದೇಶಗಳನ್ನು ಅರ್ಥ ಮಾಡಿಕೊಂಡು ಉತ್ತಮವಾದ ಜೀವನ ನಡೆಸಬೇಕು ಎಂದರು.
Kshetra Samachara
21/11/2024 06:11 pm