ಚಿತ್ರದುರ್ಗ : ಧರ್ಮದಲ್ಲಿರುವ ಕಂದಾಚಾರ, ಮೂಢನಂಬಿಕೆ ದೂರವಿಟ್ಟು, ವೈಜ್ಞಾನಿಕ ವೈಚಾರಿಕತೆಯನ್ನು ಧರ್ಮಗಳಲ್ಲಿ ಅಳವಡಿಸಿಕೊಂಡರೆ ಭವಿಷ್ಯ ಸುಗಮವಾಗಲಿದೆ ಎಂದು ಶ್ರೀ ಜಗದ್ಗುರು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪಡೆದ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಸರ್ಕಾರ ನಿಮ್ಮ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕದ ಎರಡನೇ ಬಹುದೊಡ್ಡ ಪ್ರಶಸ್ತಿಯಾಗಿದ್ದು, ಇದು ದೊರಕಿರುವುದು ನಿಮ್ಮ ಪುಣ್ಯ ಎಂದರು.
ಪ್ರಶಸ್ತಿಗೆ ಆಯ್ಕೆಯಾದವರು ಯಾರು ಕೂಡ ಅರ್ಜಿ ಹಾಕಿಲ್ಲ. ಇವರ ಸೇವೆಯನ್ನು ಪರಿಗಣಿಸಿ ಸರ್ಕಾರ ಪ್ರಶಸ್ತಿ ನೀಡಿದೆ. ಇದು ಸಂತೋಷಕರ ವಿಚಾರ ಎಂದರು. ಶಿಕ್ಷಣದಲ್ಲಿ ಸಂಸ್ಕಾರ ಸಿಕ್ಕರೆ ದೊಡ್ಡ ವ್ಯಕ್ತಿಗಳನ್ನಾಗಿ ಮಾಡಿ ಉನ್ನತ ಸ್ಥಾನಗಳಿಗೆ ಕೊಂಡೊಯ್ಯುತ್ತದೆ ಎಂದರು.
PublicNext
18/11/2024 07:43 pm