ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಬಾರ್ಡ್ ಸಾಲದ ಮೊತ್ತ ಅರ್ಧದಷ್ಟು ಕಡಿತ : ನಿರ್ಮಾಲಾ ಸೀತಾರಾಮನ್ ಭೇಟಿಯಾದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ನಬಾರ್ಡ್ ಸಾಲದ ಮೊತ್ತ ಅರ್ಧದಷ್ಟು ಕಡಿತವಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನವದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ರನ್ನ ಭೇಟಿಯಾಗಿ ಚರ್ಚೆ ನಡೆಸಿದರು. ನಬಾರ್ಡ್ ನಿಂದ ಸಾಲ ಕೋಡೋದು ಕಡಿಮೆಯಾಗಿದೆ. ಕಳೆದ ಸಲ 5600 ಕೋಟಿ ಕೊಡಲಾಗಿತ್ತು, ಈ ವರ್ಷ 2360 ಕೋಟಿ ಕೊಟ್ಟಿದ್ದಾರೆ ಸುಮಾರು 58% ಕಡಿಮೆ ನೀಡಲಾಗಿದೆ ಹೀಗಾಗಿ

ನಬಾರ್ಡ್ ನಿಂದ ರಾಜ್ಯದ ರೈತರಿಗೆ ಆಗಿರುವ ಸಾಲದ ಕೊರತೆಯನ್ನು ಸರಿಪಡಿಸಿ, ಆಗಿರುವ ಅನ್ಯಾಯವನ್ನು ಸರಿದೂಗಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್, ಚಲುವರಾಯಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.

Edited By : Nirmala Aralikatti
PublicNext

PublicNext

21/11/2024 12:30 pm

Cinque Terre

12.87 K

Cinque Terre

0

ಸಂಬಂಧಿತ ಸುದ್ದಿ