ಹುಬ್ಬಳ್ಳಿ : ಅದು ಬಡ ಕುಟುಂಬ, ತನ್ನ ಕುಟುಂಬ ನಿರ್ವಹಣೆಗೆ ಮನೆಯ ಯಜಮಾನ ಊರ ಬಿಟ್ಟು ಮತ್ತೊಂದು ಊರಲ್ಲಿ ಕಾರ್ಮಿಕನಾಗಿ ದುಡಿದು, ಬಂದಂತಹ ಹಣದಲ್ಲಿ ಸಂಸಾರದ ನೌಕೆಯನ್ನು ಸಾಗಿಸುತ್ತಿದ್ದ, ಆದ್ರೆ ಅದೆನಾಯ್ತು ಗೊತ್ತಿಲ್ಲ, ಇನ್ಯಾರೋ ಮಾಡಿರೋ ತಪ್ಪಿಗೆ ಆ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಮನೆಯ ಯಜಮಾನನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದರಿಂದಾಗಿ ಕುಟುಂಬ ದಾರಿ ಕಾಣದೇ ಕಂಗಾಲಾಗಿ ಕಣ್ಣೀರು ಹಾಕುತ್ತಿದೆ.
ಹೌದು ಹೀಗೆ ಗಂಡನ ಸಾವಿಗೆ ನ್ಯಾಯ ಕೇಳುತ್ತಿರುವ ಈಕೆಯ ಹೆಸರು ಹನುಮವ್ವ ಗುಟ್ಟೆಪ್ಪನವರ, ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ನಿವಾಸಿ. ಈಕೆಯ ಗಂಡ ವೆಂಕಟೇಶ ಗುಟ್ಟೆಪ್ಪನವರ ಕುಟುಂಬ ನಿರ್ವಹಣೆಗಾಗಿ ಊರು ಬಿಟ್ಟು ಹುಬ್ಬಳ್ಳಿಯ ನವನಗರದ ಸಹ್ಯಾದ್ರಿ ಕಾಲೋನಿಯಲ್ಲಿ, ಗಣೇಶ ಶಿರ್ಕಾರಿ ಎಂಬಾತರ ಮನೆ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ವಾಚ್ ಮನ್ ಕೆಲಸ ಮಾಡುತ್ತಿದ್ದ, ಹೀಗೆ ಕೆಲಸದ ಸಂದರ್ಭದಲ್ಲಿಯೇ ಕರೆಂಟ್ ಶಾಕ್ ಗೊಂಡು ಸಾವನ್ನಪ್ಪಿದ್ದಾನೆ.
ಇನ್ನು ಈ ಹಿಂದೆಯೂ ಕೂಡ ಮೃತ ವೆಂಕಟೇಶ್ ಸೊಸೆಗೆ ಹಾಗೂ ಅದೇ ಮನೆಯ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ವಿದ್ಯುತ್ ಸ್ಪರ್ಶವಾಗಿತ್ತಂತೆ. ಈ ಬಗ್ಗೆ ಮೃತ ವೆಂಕಟೇಶ ಮನೆಯ ಮಾಲೀಕ ಹಾಗೂ ಇಂಜಿನಿಯರ್' ಗಮನಕ್ಕೆ ತಂದಿದರಂತೆ. ಆದ್ರು ಸಹ ಎಚ್ಚೆತ್ತಿಕೊಳ್ಳದ ಕಾರಣ ಇದೀಗ ವೆಂಕಟೇಶ ಗುಟ್ಟೆಪ್ಪನವರ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಹೀಗಾಗಿ ತಮ್ಮ ಗಂಡನ ಸಾವಿಗೆ ಮನೆಯ ಮಾಲೀಕ ಗಣೇಶ ಶಿರ್ಕಾರಿ ಹಾಗೂ ಇಂಜಿನಿಯರ್ ಮೋಹನ್ ನಿಂಗಪ್ಪ ಅವರೇ ಕಾರಣ ಎಂದು ಆರೋಪಿಸಿದ್ದಾರೆ.
ಹೀಗೆ ಮನೆ ನಿರ್ಮಾಣದಲ್ಲಿ ಕಮರ್ಷಿಯಲ್ ವಿದ್ಯುತ್ ಪಡೆದಿರುತ್ತಾರೆ. ಅದನ್ನು ಯಾರಿಗೂ ತೊಂದ್ರೆ ಆಗದಂತೆ ಅಳವಡಿಸಬೇಕು, ಅಂತದರಲ್ಲಿ ಮನೆ ಮಾಲೀಕ ಮತ್ತು ಇಂಜಿನಿಯರ್ ಬೇಕಾಬಿಟ್ಟಿಯಾಗಿ ವಿದ್ಯುತ್ ಕೇಬಲ್ ಬಿಟ್ಟಿದ್ದಾರೆ. ಇದರಿಂದ ಅದೇ ಮನೆ ವಾಚ್‌ಮನ್ ಕೆಲಸ ಮಾಡುತ್ತಿದ್ದ ಬಡ ಜೀವ ಪ್ರಾಣ ಕಳೆದುಕೊಂಡಿದೆ. ಇದಕ್ಕೆ ಪೊಲೀಸರು ಆ ಕಾರ್ಮಿಕ ಕುಟುಂಬಕ್ಕೆ ಮಾಲೀಕರಿಂದ ನ್ಯಾಯ ಕೊಡಿಸಬೇಕು.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/11/2024 03:25 pm