ಫ್ಲೋರಿಡಾ: ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆ ಮಂಗಳವಾರ ನಸುಕಿನಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಸಂವಹನ ಉಪಗ್ರಹ ಜಿಸ್ಯಾಟ್-ಎನ್2 ಅನ್ನು ಯಶಸ್ವಿಯಾಗಿ ಉಡಾಯಿಸಿದೆ.
ಈ ಅತ್ಯಾಧುನಿಕ ಸಂವಹನ ಉಪಗ್ರಹವನ್ನು ಇಲ್ಲಿನ ಕೆನವೆರಲ್ ಸ್ಪೇಸ್ ಫೋರ್ಸ್ ಸ್ಟೇಷನ್‌ನಿಂದ ಸ್ಪೇಸ್ ಎಕ್ಸ್ ನ ಫಾಲ್ಕನ್ 9 ರಾಕೆಟ್ ಮೂಲಕ ನಭಕ್ಕೆ ಕಳುಹಿಸಲಾಯಿತು.
ಇಸ್ರೋ ಮತ್ತು ಸ್ಪೇಸ್ ಎಕ್ಸ್ ನಡುವಿನ ಹಲವು ವಾಣಿಜ್ಯ ಸಹಭಾಗಿತ್ವ ಯೋಜನೆಗಳ ಪೈಕಿ ಇದು ಮೊಟ್ಟ ಮೊದಲನೇ ಯೋಜನೆಯಾಗಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ದುರೈರಾಜ್ ಅವರು ಈ ಬಗ್ಗೆ ಮಾಹಿತಿ ನೀಡಿದರು.
GSAT-N2 ಉಪಗ್ರಹವನ್ನು ಇಸ್ರೋ ಸ್ಯಾಟಲೈಟ್ ಸೆಂಟರ್ ಹಾಗೂ ಲಿಕ್ವಿಡ್ ಪ್ರಪಲ್ಶನ್ ಸಿಸ್ಟಮ್ ಸೆಂಟರ್ ಅಭಿವೃದ್ಧಿಪಡಿಸಿದೆ. ಇದು 48 Gbps ಡೇಟಾ ಟ್ರಾನ್ಸ್‌ಮಿಶನ್ ಸಾಮರ್ಥ್ಯ ಹೊಂದಿದೆ. ಇದು ಬ್ರಾಂಡ್‌ಬ್ಯಾಂಡ್ ಕನೆಕ್ಷನ್ ಮತ್ತಷ್ಟು ವಿಸ್ತರಿಸಲಿದೆ. ದೇಶಾದ್ಯಂತ ಇನ್ ಫ್ಲೈಟ್ ಇಂಟರ್ನೆಟ್ ಸೇವೆ ಒದಗಿಸಲಿದೆ.
PublicNext
19/11/2024 04:46 pm