ಬಂಟ್ವಾಳ: ಸಿಡಿಲಾಘಾತದಿಂದ ಬಾಲಕನೋರ್ವ ಮೃತಪಟ್ಟ ದುರ್ಘಟನೆ ಭಾನುವಾರ ಸಂಜೆ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದಲ್ಲಿ ಸಂಭವಿಸಿದೆ.
ಕೆದಿಲ ಗ್ರಾಮದ ಗಡಿಯಾರ ಸಮೀಪದ ಮುರಿಯಾಜೆ ನಿವಾಸಿ ಚಂದ್ರಹಾಸ ಎಂಬವರ ಪುತ್ರ, ಕಲ್ಲಡ್ಕ ಶ್ರೀರಾಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸುಭೋದ್ ಸಿ. (14) సిಡಿಲು ಬಡಿದು ಮೃತಪಟ್ಟ ಬಾಲಕ.
ಸುಭೋದ್ ಸಂಜೆ ವೇಳೆ ಮನೆಯಂಗಳದಲ್ಲಿ ನಿಂತಿದ್ದ. ಈ ವೇಳೆ ಆತನಿಗೆ ಸಿಡಿಲಿನ ಶಾಕ್ ತಗಲಿದೆ ಎನ್ನಲಾಗಿದೆ. ಇದರಿಂದ ಅಸ್ವಸ್ಥನಾದ ಆತನನ್ನು ತಕ್ಷಣ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಭಾನುವಾರ ಸಂಜೆ ಬಂಟ್ವಾಳ, ವಿಟ್ಲ ಮಂಗಳೂರು, ಮೂಡುಬಿದ್ರೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಸಿಡಿಲು ಮಿಂಚಿನ ಮಳೆಯಾಗಿದೆ.
Kshetra Samachara
18/11/2024 07:40 am