ಕೊಡಗಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಭೇಟಿ ಕೊಟ್ಟಿದ್ದು ಮೊದಲಿಗೆ ಮಡಿಕೇರಿಯ ಗಣಪತಿ ಬೀದಿಯಲ್ಲಿರೋ ಕಾಂಗ್ರೆಸ್ ಪಕ್ಷದ ಕಚೇರಿಗೆ ಭೇಟಿ ಕೊಟ್ಟಿದ್ದು ಕೊಡಗಿನ ಜನರ ಸಮಸ್ಯೆ ಕುರಿತು ಆಲಿಸಿದ್ರು.
ಕೊಡಗಿನಲ್ಲಿ ಸಾಕಷ್ಟು ಸಮಯದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಸಮಸ್ಯೆಗಳಾಗಿವೆ. ಕೊಡಗು ಗುಡ್ಡಗಾಡು ಪ್ರದೇಶವಾಗಿರೋದ್ರಿಂದ ಬೆಟ್ಟ ಗುಡ್ಡಗಳಲ್ಲಿರೋ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಮಸ್ಯೆಯಾಗಿದ್ದು ಸೂಕ್ತ ರೀತಿಯಲ್ಲಿ ಸಮಸ್ಯೆ ಬಗೆ ಹರಿಸುವಂತೆ ಕಾರ್ಯಕರ್ತರು ಸಚಿವರಲ್ಲಿ ಮನವಿ ಮಾಡಿದ್ರು. ಕೊಡಗಿನ ಸಮಸ್ಯೆ ಆಲಿಸಿದ ಸಚಿವರು ಶಾಸಕರುಗಳಾದ ಪೊನ್ನಣ್ಣ ಹಾಗೂ ಮಂತರ್ ಗೌಡ ಇಬ್ಬರೊಂದಿಗೆ ಚರ್ಚಿಸಿ ನಮ್ಮ ಇಲಾಖಾ ಮಟ್ಟದಲ್ಲಾಗುವ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ರು.
PublicNext
16/11/2024 03:31 pm