ಚನ್ನಮ್ಮನ ಕಿತ್ತೂರು : ಕಾರ್ತೀಕ ಮಾಸದ ಅಂಗವಾಗಿ ಕಿತ್ತೂರು ತಾಲೂಕಿನ ಡೊಂಬರಕೊಪ್ಪ ಗ್ರಾಮಸ್ಥರು ಶ್ರೀಕ್ಷೇತ್ರ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ಹೊರಟಿದ್ದಾರೆ.
ಡೊಂಬರಕೊಪ್ಪ ಗ್ರಾಮದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 6 ನೇ ವರ್ಷದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಸುಮಾರು 50 ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆ ಮೂಲಕ ಉಳವಿ ಕ್ಷೇತ್ರಕ್ಕೆ ಹೊರಟಿದ್ದು, ಮೂರನೇ ದಿನಕ್ಕೆ ಉಳವಿಯ ಚನ್ನಬಸವೇಶ್ವರ ದೇವಸ್ಥಾನವನ್ನು ತಲುಪುತೇವೆ ಎಂದು ಪಾದಯಾತ್ರೆ ನೇತೃತ್ವ ವಹಿಸಿದ ಮಲ್ಲಿಕಾರ್ಜುನ ತೆಗೂರ ತಿಳಿಸಿದ್ದಾರೆ.
Kshetra Samachara
13/11/2024 01:26 pm