ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಗವಾಡ: ಮಾಜಿ ಸಚಿವ ಶ್ರೀಮಂತ ಪಾಟೀಲ ವಕೀಲರ ಮುಷ್ಕರಕ್ಕೆ ಬೆಂಬಲ ಉಗ್ರ ಹೋರಾಟದ ಎಚ್ಚರಿಕೆ

ಕಾಗವಾಡ: ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಿಸಲು ನನ್ನ ಅವಧಿಯಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇನೆ. ಆಗಿನ ಎಪಿಎಂಸಿ ಸಚಿವ ಬಂಡೆಪ್ಪಾ ಕಾಶಪ್ಪನ್ನವರ ಅನುಮತಿ ಕೂಡಾ ನೀಡಿದ್ದರು. ಆದರೇ ಕೆರೆ ಪಕ್ಕದ ಜಾಗ ಬಫರ್ ಝೋನ್ ಎಂದು ಪರಿಗಣಿಸಿ, ನ್ಯಾಯಾಲಯ ನಿರ್ಮಾಣಕ್ಕಾಗಿ ಅಡ್ಡಿ ಉಂಟಾಗಿ, ಅದು ನೆನೆಗುದಿಗೆ ಬಿದ್ದಿದೆ. ಈಗಲೂ ನಾನು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿ, ಸಮಸ್ಯೆ ಪರಿಹಾರಕ್ಕೆ ಶ್ರಮಿಸುವುದಾಗಿ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಶ್ರೀಮಂತ ಪಾಟೀಲ ತಿಳಿಸಿದ್ದಾರೆ.

ಅವರು, ಮಂಗಳವಾರ ದಿ. 12 ರಂದು ಪಟ್ಟಣದಲ್ಲಿ ತಾಲೂಕಾ ವಕೀಲರ ಸಂಘದ ಸದಸ್ಯರು ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಮುಷ್ಕರ ಸ್ಥಳಕ್ಕೆ ಭೇಟ್ಟಿ ನೀಡಿ, ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡುತ್ತಿದ್ದರು. ಕಾಗವಾಡ ಕ್ಷೇತ್ರದ ಬಹುಭಾಗ ಕಬ್ಬು ಬೆಳೆಯುವ ಪ್ರದೇಶವಾಗಿದ್ದು, ಇಲ್ಲಿ ಎಪಿಎಂಸಿಯ ಅವಶ್ಯಕತೆ ಅಷ್ಟೇನೂ ಇಲ್ಲಾ. ಆದ್ದರಿಂದ ಎಪಿಎಂಸಿ ಬಳಿ ಇರುವ ಹೆಚ್ಚುವರಿ ಜಾಗವನ್ನು ಸರ್ಕಾರ ನ್ಯಾಯಾಲಯ ಕಟ್ಟಡಕ್ಕೆ ನೀಡಬೇಕು. ಅದಕ್ಕಾಗಿ ನಾನು ಶ್ರಮಿಸುವುದಾಗಿ ಭರವಸೆ ನೀಡಿದರು.ವ ಇನ್ನೂ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ತಾಲೂಕಿನ ಜುಗೂಳ, ಮಂಗಸೂಳಿ, ಉಗಾರ ಬಿಕೆ, ಗ್ರಾಮ ಪಂಚಾಯತಿಗಳು, ಪಿಕೆಪಿಎಸ್ ಸಂಘಗಳು, ರಾಯಬಾಗ ವಕೀಲರ ಸಂಘ, ದಲಿತ ಸಂಘಟನೆಗಳು, ರೈತ ಸೇವಾ ಸೊಸೈಟಿ, ಕಾರ್ಮಿಕ ಸಂಘಟನೆಗಳು, ಕಾರ್ಯನಿರತ ಪತ್ರಕರ್ತರ ಸಂಘಟನೆಯಿAದ ಬೆಂಬಲ ವ್ಯಕ್ತವಾಗುತ್ತಿದೆ.

ಈ ವೇಳೆ ಮುಷ್ಕರ ನಿರತ ವಕೀಲರ ಸಂಘದ ಅಧ್ಯಕ್ಷ ಪಿ.ಎ. ಮಾನೆ ಮಾತನಾಡಿ, ನಮಗೆ ನ್ಯಾಯ ದೊರೆಯದೇ ಇದ್ದಲ್ಲಿ ನಾಳೆಯಿಂದ ಉಗ್ರವಾಗಿ ಹೋರಾಟ ಪ್ರಾರಂಭಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಸಮಯದಲ್ಲಿ ರೈತ ಮುಖಂಡ ದಾದಾ ಪಾಟೀಲ, ದಲಿತ ಮುಖಂಡ ಸಂಜಯ ತಳವಳಕರ, ಜುಗೂಳ ಪಿಕೆಪಿಎಸ್ ಅದ್ಯಕ್ಷ ಅಣ್ಣಾಸಾಬ ಪಾಟೀಲ, ಕಾಗವಾಡ ಪಿಕೆಪಿಎಸ್ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ಉಗಾರ ಬಿಕೆ ಪಿಕೆಪಿಎಸ್ ಅಧ್ಯಕ್ಷ ಶೀತಲ ಪಾಟೀಲ, ಜುಗೂಳ ಗ್ರಾ.ಪಂ. ಅಧ್ಯಕ್ಷ ಕಾಕಾಸಾಬ ಪಾಟೀಲ, ಕಾರ್ಮಿಕ ಸಂಘದ ಅಧ್ಯಕ್ಷ ಅರುಣ ಜೋಶಿ, ರೈತ ಸೇವಾ ಸಂಘಟನೆಯ ಅಧ್ಯಕ್ಷ ಶಾಂತಿನಾಥ ಕರವ, ಅರುಣ ಗಣೇಶವಾಡಿ ಸೇರಿದಂತೆ ವಕೀಲರ ಸಂಘದ ಅಧ್ಯಕ್ಷ ಪಿ.ಎ. ಮಾನೆ, ಉಪಾಧ್ಯಕ್ಷ ಬಿ.ಎ. ಮಗದುಮ್ಮ, ಕಾರ್ಯದರ್ಶಿ ಎಂ.ಜಿ. ವಡ್ಡರ, ಜಂಟಿ ಕಾರ್ಯದರ್ಶಿ ಪಿ.ಎ. ಕಿರಣಗಿ, ಮಹಿಳಾ ಪ್ರತಿನಿಧಿ ಎ.ಎ. ಪಾಟೀಲ, ಹಿರಿಯ ನ್ಯಾಯವಾದಿಗಳಾದ ಅಭಯ ಅಕಿವಾಟೆ, ಎಸ್.ಬಿ. ಪಾಟೀಲ, ವೈ.ಬಿ. ಯಡೂರೆ, ಎ.ಆರ್. ಪಾಟೀಲ, ಎಂ.ಎ. ಪಾಟೀಲ, ಎಂ.ಎಸ್. ಹೊನಕಾಂಬಳೆ, ಬಿ.ಎ. ಗಣೆ ಮತ್ತು ರಾಯಬಾಗ ವಕೀಲರ ಸಂಘದ ಸದಸ್ಯರು, ಅನೇಕ ಮುಖಂಡರು ಮತ್ತು ವಕೀಲರ ಉಪಸ್ಥಿತರಿದ್ದರು. ಇನ್ನೂ ಇದೇ ವೇಳೆ ನಾಳೆಯಿಂದ ಉಗ್ರವಾದ ಹೋರಾಟ ಮಾಡುವುದಾಗಿ ವಕೀಲರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

13/11/2024 12:18 pm

Cinque Terre

5.02 K

Cinque Terre

0