ಹಾವೇರಿ : ಹಾವೇರಿ ನಗರದ ಬಸವೇಶ್ವರ ನಗರದ 1 ನೇ ಕ್ರಾಸ್ ನಲ್ಲಿರುವ ಕಾಶೀನಾಥ್ ಭಜಂತ್ರಿ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಸರಬರಾಜು ಉಪವಿಭಾಗದ ಎಇ ಅಧಿಕಾರಿ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ದಾಳಿ ಆಗ್ತಿದ್ದಂತೆ ಅಧಿಕಾರಿ ಭಯದಿಂದ ಲಕ್ಷಾಂತರ ರೂಪಾಯಿ ಗಂಟು ಕಟ್ಟಿ ಕಿಡಿಕಿ ಮೂಲಕ ಹೊರಗೆ ಬಿಸಾಡಿದ ಪ್ರಸಂಗ ಕಂಡುಬಂದಿದೆ.
9 ಲಕ್ಷ ರೂಪಾಯಿ ಹಣ ಗಂಟು ಕಟ್ಟಿ ಕಿಡಿಕಿ ಮೂಲಕ ಹೊರಗೆ ಕಾಶಿನಾಥ್ ಭಜಂತ್ರಿ ಬಿಸಾಡಿದ್ದಾರೆ. ಅಷ್ಟೇ ಅಲ್ಲದೆ 2 ಲಕ್ಷ ರೂಪಾಯಿ ಕ್ಯಾಶ್ ಬೆಡ್‌ನಲ್ಲಿ ಸುತ್ತಿ ಇಟ್ಟಿದ್ದು ಬೆಳಕಿಗೆ ಬಂದಿದೆ.
ಕಾಶೀನಾಥ್ ಭಜಂತ್ರಿ ನಿವಾಸದಲ್ಲಿರುವ ಕಡತಗಳು, ದಾಖಲೆಗಳ ಪರಿಶೀಲನೆ ನಡೆದಿದೆ. ಲೋಕಾಯುಕ್ತ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
PublicNext
12/11/2024 11:46 am