ಬಳ್ಳಾರಿ: ಸಚಿವ ಸಂತೋಷ ಲಾಡ್ ಅವರಿಗೆ ಯಾವುದೇ ಜವಾಬ್ದಾರಿ ಕೊಟ್ಟರೇ ಸಾಕು ಅರ್ಧದಲ್ಲಿ ಬಿಟ್ಟು ಬರುವ ವ್ಯಕ್ತಿಯೇ ಅಲ್ಲ. ಒಮ್ಮೆ ಛಲ ತೊಟ್ಟರೇ ದಡ ಮುಟ್ಟಿಸಿ ಬರುವ ಛಲಗಾರ. ಇಂತಹದೊಂದು ನಿದರ್ಶನಕ್ಕೆ ಸಾಕ್ಷಿಯಾಗಿದ್ದು, ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ.
ಕಣ್ಣು ಹಾಯಿಸಿದಷ್ಟು ಜನಸಾಗರ, ಎಲ್ಲೆಡೆಯೂ ಸಂತೋಷ ಲಾಡ್ ಅಬ್ಬರ. ನಾಡದೊರೆಯೊಂದಿಗೆ ನಡೆದಿದೆ ಕ್ಷೇತ್ರದಲ್ಲಿ ಬಹುದೊಡ್ಡ ಸಮರ. ಹೌದು..ಸಂಡೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರನ್ನು ಗೆಲ್ಲಿಸುವ ಜವಾಬ್ದಾರಿಯ ನೊಗ ಹೊತ್ತ ಸಂತೋಷ ಲಾಡ್ ಅಭಿಮಾನಕ್ಕೆ ಸೇರಿದ್ದ ಜನಸಾಗರವೇ ಸಾಕ್ಷಿಯಾಗಿದೆ.
ಬೊಮ್ಮಘಟ್ಟ, ಚೋರನೂರು, ಬಂಡ್ರಿ, ಯಶವಂತನಗರ, ತೋರಣಗಲ್ಲು, ದರೋಜಿ ಹೀಗೆ ಹೋದ ಕಡೆಯಲ್ಲಿ ಅಭಿಮಾನದ ಹಾರೈಕೆಗಳು ಕಾಂಗ್ರೆಸ್ಸಿನ ಆತ್ಮವಿಶ್ವಾಸ ಇಮ್ಮಡಿಗೊಳಿಸಿದೆ. ಇದೆಲ್ಲದಕ್ಕೂ ಸಹೃದಯಿ ಸಂತೋಷ ಲಾಡ್ ಮೇಲಿನ ಅಭಿಮಾನ ಅಂತಾರೇ ಇಲ್ಲಿನ ಜನ...
ರಾಜ್ಯ ರಾಜಕಾರಣದಲ್ಲಿ ಜನಸೇವಕ ಎಂದೇ ಬಿರುದಾಂಕಿತರಾಗಿರುವ ಸಂತೋಷ ಲಾಡ್ ಅವರಿಗೆ ಜನರು ಆತ್ಮೀಯವಾಗಿ ದಾದಾ ಅಂತಾರೇ. ಅಂತಹ ದಾದಾರನ್ನು ನೋಡಲು ದಾರಿ ಹಿಡಿಯದಂತೆ ಜನರು ಸೇರಿರುವುದು ನಿಜಕ್ಕೂ ಸಂತೋಷ ಲಾಡ್ ಜನಾಭಿಮಾನಕ್ಕೆ ಸಾಕ್ಷಿಯಾಗಿದೆ.
PublicNext
09/11/2024 06:53 am