ಬೆಂಗಳೂರು : ವಿಡಿಯೋ ಮಾಡುತ್ತಿದ್ದ ಯುವತಿ ಜೊತೆ ಯುವಕನೊಬ್ಬ ತೋರಿದ ವಿಕೃತ ವರ್ತನೆಯಿಂದ ಯುವತಿ ಕಣ್ಣೀರಿಟ್ಟಿದ್ದಾಳೆ. ಬೆಂಗಳೂರಿನ ಬಿಟಿಎಮ್ ಲೇಔಟ್ ನಲ್ಲಿ ಘಟನೆ ನಡೆದಿದ್ದು, ನೇಹಾ ಬಿಸ್ವಾಲ್ ಎಂಬ ಯುವತಿ ಜೊತೆ ಅಪರಿಚಿತನಿಂದ ಅಸಭ್ಯ ವರ್ತನೆ ತೋರಿದ್ದಾನೆ.
ಮಂಗಳವಾರ ಬಿಟಿಎಮ್ ಲೇಔಟ್ ನಲ್ಲಿ ಸೆಲ್ಫಿ ವಿಡಿಯೋ ಮಾಡಿಕೊಂಡು ಯುವತಿ ಬ್ಲಾಗ್ ಮಾಡ್ತಿದ್ಳು. ಈ ವೇಳೆ ಸೈಕಲ್ ನಲ್ಲಿ ಬಂದಿದ್ದ ಅಪರಿಚಿತ ಯುವಕ ಅಸಭ್ಯ ವರ್ತನೆ ತೋರಿದ್ದನಂತೆ. ಈ ವಿಚಾರವನ್ನು ಯುವತಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಅಳಲು ತೋಡಿಕೊಂಡಿದ್ದಾಳೆ.
ಓರ್ವ ವ್ಯಕ್ತಿ ನಾನು ವಿಡಿಯೋ ಮಾಡುವಾಗ ಸೈಕಲ್ನಲ್ಲಿ ಬಂದು ರೇಗಿಸಿದ್ದಾನೆ. ನಂತರ ಎದೆಭಾಗವನ್ನು ಮುಟ್ಟಿ ಸೈಕಲ್ ನಲ್ಲಿ ಓಡಿ ಹೋದ. ಇಲ್ಲಿ ಸೇಫ್ಟಿ ಇಲ್ಲವಾ ಅನ್ನೋ ಪ್ರಶ್ನೆ ಮೂಡ್ತಿದೆ ಎಂದು ವಿಡಿಯೋ ಮಾಡಿದ್ದಾಳೆ. ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು ಸದ್ಯ ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.
PublicNext
06/11/2024 07:56 pm