ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ, ಅಭಿವೃದ್ಧಿ ಶೂನ್ಯ ಸರ್ಕಾರ - ಆರಗ ಜ್ಞಾನೇಂದ್ರ ವಾಗ್ದಾಳಿ

ಶಿವಮೊಗ್ಗ : ವಾಲ್ಮೀಕಿ ಜಯಂತಿ ಈ ಬಾರಿ ಅದ್ಧೂರಿಯಾಗಿ ಆಚರಿಸಿದೆ. ವಿಶೇಷವಾಗಿ ಜಾಹಿರಾತು ನೀಡಿದ್ದು, ಅನೇಕ ಕಾರ್ಯಕ್ರಮಗಳನ್ನು ಘೋಷಿಸಿದೆ. ಆದರೆ ಸರ್ಕಾರ ಯಾವ ಮುಖ ಇಟ್ಟುಕೊಂಡು ಈ ಜಯಂತಿ ಆಚರಿಸುತ್ತಿದೆ ಎಂದು ಮಾಜಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್, ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ಈ ನಿಗಮದ ಅವ್ಯವಹಾರ ಬೆಳಕಿಗೆ ಬಂದಿದೆ. ಆದ್ದರಿಂದ ಸರ್ಕಾರ ಮೊದಲು ರಾಜ್ಯದ ಜನರ ಕ್ಷಮೆ ಕೇಳಿ ಬಳಿಕ ವಾಲ್ಮೀಕಿ ಜಯಂತಿ ಆಚರಣೆ ಮಾಡಬೇಕಿತ್ತು ಎಂದಿದ್ದಾರೆ.

ಮೊದಲು ಮುಖ್ಯಮಂತ್ರಿಗಳು ಹಗರಣವೇ ನಡೆದಿಲ್ಲ, ಮಂತ್ರಿಗಳು ಭಾಗಿಯಾಗಿಲ್ಲ ಎಂದರು. ಚಂದ್ರಶೇಖರ್ ಅವರ ಡೆತ್ ನೋಟ್‍ನಲ್ಲಿ ಮಂತ್ರಿಗಳ ಹೆಸರು ಇತ್ತು, ಆದರೂ ತನಿಖೆಗೆ ಎಸ್‍ಐಟಿ ನೇಮಕ ಮಾಡಿ ಎಫ್‌ ಐಆರ್ ನಲ್ಲಿ ಮಂತ್ರಿಗಳ ಹೆಸರು ಕೈಬಿಡಲಾಗಿತ್ತು. ಇ.ಡಿ. ಈ ಪ್ರಕರಣಕ್ಕೆ ಕೈಹಾಕಿದ ಮೇಲೆ ತನಿಖೆ ನಡೆಸಿ ಚಾರ್ಜ್‌ ಶೀಟ್ ಸಲ್ಲಿಸಿದ್ದು, ಅದರಲ್ಲಿ ಸಚಿವ ನಾಗೇಂದ್ರರೇ ಈ ಪ್ರಕರಣದ ಕಿಂಗ್‍ಪಿನ್ ಹೇಳಿದೆ. 87 ಕೋಟಿ ಹಗರಣ ಹಾಗಿದ್ದು ನಿಜ ಎಂದು ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ಹೇಳಿಕೆ ನೀಡಿದ್ದಾರೆ.

ಮೃತ ಚಂದ್ರಶೇಖರ್ ಪತ್ನಿ, ಹೇಳಿಕೆಯನ್ನು ಮೂರು ಬಾರಿ ಬದಲಾಯಿಸಲಾಗಿದೆ. ಶಿವಮೊಗ್ಗದ ಡಿ.ವೈ.ಎಸ್.ಪಿ. ಅವರು ತಾವೇ ಹೇಳಿಕೆಯನ್ನು ಬರೆದು ಚಂದ್ರಶೇಖರ್ ಪತ್ನಿಯ ಸಹಿ ಹಾಕಿಸಿಕೊಂಡಿದ್ದಾರೆ. ಡೆತ್‍ನೋಟ್ ಅನ್ವಯ ಎಫ್.ಐ.ಆರ್. ದಾಖಲಿಸಿಲ್ಲ ಎಂದರು. ಈ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು, ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ. ಗುತ್ತಿಗೆದಾರರಿಗೆ ಹಣ ನೀಡದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಕೂಡ ವಿಫಲವಾಗಿದೆ ಎಂದಿದ್ದಾರೆ.

ಸಚಿವ ನಾಗೇಂದ್ರ ಇ.ಡಿ. ವಿರುದ್ದ ನೀಡಿದ್ಧ ಹೇಳಿಕೆ ಅವರ ಜಾಮೀನಿನ ಮೇಲೆ ಪರಿಣಾಮ ಬೀರಲಿದೆ. ಅವರ ಜಾಮೀನು ರದ್ಧತಿಗೆ ನಾವು ಪ್ರಯತ್ನಿಸುತ್ತೇವೆ. ಮುಂಬರುವ ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಎನ್‍ಡಿಎ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದಿದ್ದಾರೆ.

Edited By : Suman K
PublicNext

PublicNext

17/10/2024 06:58 pm

Cinque Terre

32.85 K

Cinque Terre

4

ಸಂಬಂಧಿತ ಸುದ್ದಿ