ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹುಣ್ಣಿಮೆ ದಿನವಾದ ಇಂದು ಸೂಪರ್‌ಮೂನ್ - ಧೂಮಕೇತು ದರ್ಶನ

ಉಡುಪಿ: ಹುಣ್ಣಿಮೆ ದಿನವಾಗಿರುವ ಅಕ್ಟೋಬರ್ 17ರ ಗುರುವಾರ ಸೂಪರ್‌ಮೂನ್ ಗೋಚರಿಸಲಿದೆ. ಪಶ್ಚಿಮ ಆಕಾಶದಲ್ಲಿ ಸೂರ್ಯಾಸ್ತವಾದೊಡನೆ ಹೊಳೆಯುವ ಶುಕ್ರ ಗ್ರಹದ ಪಕ್ಕದಲ್ಲಿ 27 ವರ್ಷಗಳಲ್ಲಿ ಕಾಣದ ಅಪರೂಪದ ಹಾಗೂ ಚೆಂದದ ಬಾಲದ ಸುಚಿನ್ಸಾನ್ ಅಟ್ಲಾಸ್ ಧೂಮಕೇತು ಗೋಚರವಾಗಲಿದೆ.

ಮಳೆ, ಮೋಡ ವಾತಾವರಣ ಇಲ್ಲದಿದ್ದರೆ ಮುಸ್ಸಂಜೆಯ ಪೂರ್ವ ಆಕಾಶದಲ್ಲಿ ಚಂದ್ರನನ್ನು ಹಾಗೂ ಪಶ್ಚಿಮ ಆಕಾಶದಲ್ಲಿ ಧೂಮಕೇತು ಉತ್ತಮವಾಗಿ ಗೋಚರವಾಗಲಿದೆ ಎಂದು ಖಗೋಳ ಶಾಸ್ತ್ರಜ್ಞ ಡಾ| ಎ. ಪಿ. ಭಟ್ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

17/10/2024 09:18 am

Cinque Terre

680

Cinque Terre

0