ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 2.2 ಕೆಜಿ ಗಡ್ಡೆ ಹೊರತೆಗೆದ ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆ ವೈದ್ಯರು - ಉಳಿಯಿತು ಬಡ ಜೀವ

ಹುಬ್ಬಳ್ಳಿ: ಸದಾ ಒಂದಿಲ್ಲೊಂದು ವಿಶೇಷ ಶಸ್ತ್ರ ಚಿಕಿತ್ಸೆಗೆ ಹೆಸರಾಗಿರುವ ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆ ವೈದ್ಯರು ಮತ್ತೊಂದು ಮಹತ್ವದ ಶಸ್ತ್ರ ಚಿಕಿತ್ಸೆ ಮಾಡುವುದರ ಮೂಲಕ ಮಹಿಳೆಯ ಜೀವ ಉಳಿಸುವ ಕೆಲಸವನ್ನು ಮಾಡಿದ್ದಾರೆ.

ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಮೊದಲಿನಿಂದಲೂ ಬಡವರಿಗೆ ಬಹಳಷ್ಟು ಅನಕೂಲ ಸಹಕಾರಿ ಆಗಿ ಕೆಲಸ ಮಾಡುತ್ತಿದೆ. ಅದರಂತೆ ಈಗ ಚಿಟಗುಪ್ಪಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀದರ್ ದಂಡೆಪ್ಪನವರ ಬಂದ ಮೇಲೆ ಶಸ್ತ್ರ ಚಿಕಿತ್ಸೆ ಹಾಗೂ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ಮಾಡಿ ಹಲವಾರು ಜನರ ಜೀವವನ್ನು ಉಳಿಸಿದ್ದಾರೆ. ಈಗ ಮಹಿಳೆಯ ಹೊಟ್ಟೆಯೊಳಗಿದ್ದ 2.2 ಕೆ.ಜಿ ತೂಕದ ಗಡ್ಡೆಯನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ 42 ವಯಸ್ಸಿನ ಮಹಿಳೆಯು ಹೊಟ್ಟೆ ನೋವು, ರಕ್ತಹೀನತೆ ಹಾಗೂ ಸುಸ್ತಿನಿಂದ ಬಳಲುತ್ತಿದ್ದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಬಳಿ ತಮಗಾಗುತ್ತಿರುವ ನೋವು ಕುರಿತು ಮಾಹಿತಿಯನ್ನು ನೀಡಿದಾಗ ಡಾ.ಶ್ರೀಧರ ಎರಡು ದಿನ ಹಿಂದೆ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿದಾಗ, ಹೊಟ್ಟೆಯಲ್ಲಿ 2.2 ಕೆಜಿ ತೂಕದ ಗಡ್ಡೆ (ಫೈಬ್ರಾಯಿಡ್ ಯುಟ್ರಸ್) ಇರುವುದು ಪತ್ತೆಯಾಗಿತ್ತು. 2 ಬಾರಿ ಸಿಜೆರಿಯನ್ ಆಗಿದ್ದು, ಮೊದಲೇ ರಕ್ತಹೀನತೆಯಿಂದ ಬಳಲುತ್ತಿದ್ದ ಮಹಿಳೆಗೆ, ಶಸ್ತ್ರ ಚಿಕಿತ್ಸೆ ನೆರವೇರಿಸುವುದು ಅನಿವಾರ್ಯ ಎಂದು, ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದಾರೆ. ನಿನ್ನೆ ಬೆಳಗ್ಗೆ ಶುಕ್ರೂಷಾಧಿಕಾರಿಗಳಾದ ರಾಮು, ಮಂಜುಳಾ, ಪೂಜಾ, ಸುನೀಲ್, ತೇಜಸ್ವಿನಿ ಸಹಾಯದೊಂದಿಗೆ ಡಾ. ಶ್ರೀಧರ ದಂಡೆಪ್ಪನವರ್ ಶಸ್ತ್ರ ಚಿಕಿತ್ಸೆ ಮಾಡಿ ಆಕೆಯ ಜೀವ ಉಳಿಸಿದ್ದಾರೆ.

ಸಧ್ಯ ಮಹಿಳೆ ಸ್ಥಿತಿ ಬಹಳ ಸುಧಾರಿಸಿದ್ದು ಇನ್ನೆರೆಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿಯ ದೊಡ್ಡ ಗಡ್ಡೆ ತೆಗೆದಿರುವುದು ಇದೇ ಮೊದಲು ಎಂಬುದು ವಿಶೇಷವಾಗಿದೆ. ಒಟ್ಟಿನಲ್ಲಿ ಬಡವರ ಕಾಳಜಿ ಹಾಗೂ ಇತರ ಸೇವೆಯನ್ನು ಉತ್ತಮವಾಗಿ ನೀಡುತ್ತಿರುವ ಚಿಟಗುಪ್ಪಿ ಆಸ್ಪತ್ರೆ ಸಿಬ್ಬಂದಿ ಕಾರ್ಯ ಎಲ್ಲರು ಮೆಚ್ಚುವಂತದ್ದು.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/10/2024 03:11 pm

Cinque Terre

180.1 K

Cinque Terre

13