ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಜಂಗಿ ಕುಸ್ತಿಯಲ್ಲಿ ತೊಡೆ ತಟ್ಟಿದ ಪೈಲ್ವಾನರು- ಮದಗಜಗಳಂತೆ ಹೋರಾಡಿದರು

ಚಿಕ್ಕಮಗಳೂರು: ತಾಲೂಕಿನ ತರೀಕೆರೆ ಪಟ್ಟಣದ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ವತಿಯಿಂದ ಆಯೋಜಿಸಿರುವ ಜಂಗಿ ಕುಸ್ತಿಗೆ ಇಂದು ಚಾಲನೆ ಸಿಕ್ಕಿತು.

ಚಿಕ್ಕಮಗಳೂರು ಜಿಲ್ಲೆಯಷ್ಟೇ ಅಲ್ಲದೆ, ಶಿವಮೊಗ್ಗ, ಹಾಸನ, ಹಾವೇರಿ, ಧಾರವಾಡ, ದಾವಣಗೆರೆ, ಕಲಬುರಗಿ, ಗದಗ, ಬಾಗಲಕೋಟೆ, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 200ಕ್ಕೂ ಅಧಿಕ ಪೈಲ್ವಾನರು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.

ವಿವಿಧ ವಿಭಾಗಗಳಲ್ಲಿ ನಡೆದ ಜಂಗಿ ಕುಸ್ತಿಯಲ್ಲಿ ಪೈಲ್ವಾನರು ಮದಗಜಗಳಂತೆ ಕಾದಾಡಿದ್ರು. ಮಕ್ಕಳ ಕುಸ್ತಿ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಕುಸ್ತಿ ವೀಕ್ಷಿಸಲು ಸಾವಿರಾರು ಜನರು ಜಮಾವಣೆಗೊಂಡಿದ್ದರು.

Edited By : Nagesh Gaonkar
PublicNext

PublicNext

13/10/2024 08:44 pm

Cinque Terre

42.57 K

Cinque Terre

0