ಮಳೆಗಾಲದ ಈ ಟೈಮ್ನಲ್ಲಿ ಜನ ಛತ್ರಿ ಮತ್ತು ರೇನ್ಕೋಟ್ ಕೊಳ್ಳುವುದು ಸಾಮಾನ್ಯ ಆದ್ರೆ ಈಗೊಂದು ಛತ್ರಿ ಬಂದಿದೆ. ಇದು ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಜೊತೆಯಾಗಿಯೇ ಸಾಗಬಹುದಾದ ಬ್ಯೂಟಿಪುಲ್ ಛತ್ರಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಹೌದು ‘ಜೋಡಿ ಛತ್ರಿ’ ಚೀನಾದ ತೈವಾನ್ನಲ್ಲಿ ತಯಾರಿಸಲಾಗಿದೆ. ಇದೇ ಜೋಡಿ ಛತ್ರಿಯಲ್ಲಿ ಇಬ್ಬರು ವ್ಯಕ್ತಿಗಳು ಆರಾಮದಾಯಕವಾಗಿ ಹೋಗಬಹುದು. ಇದೇ ಟು-ಇನ್-ಒನ್ ಛತ್ರಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇನ್ನು, ಜೋಡಿ ಛತ್ರಿಯನ್ನು ಇಬ್ಬರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ.
ಇನ್ನು ದಂಪತಿ, ಪ್ರೇಮಿಗಳು, ಅಣ್ಣ ಹಾಗೂ ತಮ್ಮ, ಅಕ್ಕ ಅಥವಾ ತಂಗಿ ಹೀಗೆ ಜೋಡಿಯಾಗಿ ಹೊರಗಡೆ ಹೋಗುವಾಗ ಪ್ರತ್ಯೇಕ ಛತ್ರಿಗಳ ಬದಲು ಈ ಜೋಡಿ ಛತ್ರಿ ತೆಗೆದುಕೊಂಡು ಹೋದರೆ ತುಂಬಾ ಸುಂದರವಾಗಿ ಕಾಣುತ್ತದೆ.
PublicNext
24/07/2024 03:42 pm