ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಿಯಮ ಮೀರಿ ಧ್ವನಿವರ್ಧಕ ಬಳಕೆ: 345 ಧಾರ್ಮಿಕ ,ಮತ್ತಿತರ ಕೇಂದ್ರಗಳಿಗೆ ನೊಟೀಸ್ ಜಾರಿ

ಉಡುಪಿ : ನಿಯಮ ಮೀರಿ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯು ವಿವಿಧ ಜಿಲ್ಲೆಗಳ ಧಾರ್ಮಿಕ‌ ಕೇಂದ್ರಗಳಿಗೆ ನೊಟೀಸ್ ಜಾರಿ ಮಾಡುತ್ತಿದ್ದು, ಅದರಂತೆ ಉಡುಪಿ ಜಿಲ್ಲೆಯ 345 ಧಾರ್ಮಿಕ ಹಾಗೂ ಇತರ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ.

ಜಿಲ್ಲೆಯ 122 ಮಸೀದಿಗಳು, 120 ದೇವಸ್ಥಾನಗಳು, 44 ಚರ್ಚ್‌ಗಳು, ಎಂಟು ಪಬ್ ಹಾಗೂ ಏಳು ಇತರ ಸಂಸ್ಥೆಗಳಿಗೆ ನೋಟೀಸ್ ನೀಡಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. ಇನ್ನು ಉಳಿದ ಸಂಸ್ಥೆಗಳನ್ನು ಗುರುತಿಸಿ ನೋಟೀಸ್ ನೀಡಲಾಗುವುದು. ಮುಂದೆ ಈ ಬಗ್ಗೆ ಹೈಕೋರ್ಟ್ ಆದೇಶದಂತೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.

Edited By : PublicNext Desk
PublicNext

PublicNext

07/04/2022 09:04 am

Cinque Terre

21.57 K

Cinque Terre

2