ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರದ ಹಲವು ಏರಿಯಾಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

ಕೆ ಆರ್ ಪುರಂ: ನಗರದಲ್ಲಿ ಕಳೆದ 3 ದಿನಗಳಿಂದ ಸುರಿದ ಮಳೆಗೆ ಕಾಡುಬೀಸನಹಳ್ಳಿಯ ಪವರ್ ಸ್ಟೇಷನ್‌ಗೆ ಮಳೆ ನೀರು ನುಗ್ಗಿದೆ. ಹೀಗಾಗಿ ಸುತ್ತಲ್ಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವೈಟ್ ಫೀಲ್ಡ್, ಸರ್ಜಾಪುರ, ಕೋರಮಂಗಲ, ಹೊಸಕೋಟೆ, ಕೆ.ಆರ್,ಪುರ, ಬಾಣಸವಾಡಿ ಸೇರಿದಂತೆ ಹಲವು ಏರಿಯಾಗಳಿಗೆ ವಿದ್ಯುತ್ ವ್ಯತ್ಯಯ ಆಗಲಿದೆ.

ಸದ್ಯ ಬೇರೆ ವಿದ್ಯುತ್ ಕೇಂದ್ರಗಳಿಂದ ಪರ್ಯಾಯವಾಗಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಪವರ್ ಸ್ಟೇಷನ್ ಅಧಿಕಾರಿಗಳು ಮುಂದಾಗಿದ್ದಾರೆ. BWSSB ಕೊಳಚೆ ನೀರು ಶುದ್ದೀಕರಣ ಘಟಕದ ನೀರು ಉಕ್ಕಿ ಹರಿದ ಪರಿಣಾಮ ಏಕಾಏಕಿ ಬೆಸ್ಕಾಂ ಪವರ್ ಸ್ಟೇಷನ್ಗೆ ನೀರು ನುಗ್ಗಿತ್ತು.

ಹೀಗಾಗಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪ್ರಸ್ತುತ ನೀರಿನ ಪ್ರಮಾಣ ಕಡಿಮೆಯಾಗಿದ್ದು ಸಾರ್ವಜನಿಕರಿಗೆ ತೊಂದರೆ ಆಗದಂತೆ ಶೀಘ್ರವೇ ವಿದ್ಯುತ್ ಸರಬರಾಜು ಮಾಡಲಾಗುವುದು. ಕಾಡುಬೀಸನಹಳ್ಳಿಯ ಪವರ್ ಸ್ಟೇಷನ್ ಸರಿಯಾಗಲು ಇನ್ನು 3 ದಿನ ಬೇಕಾಗುತ್ತೆ ಎಂದು ಬೆಸ್ಕಾಂನ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

Edited By : Abhishek Kamoji
PublicNext

PublicNext

08/09/2022 02:27 pm

Cinque Terre

12.61 K

Cinque Terre

0